ಭಾರತದಲ್ಲಿ ವಾರಸುದಾರರಿಲ್ಲದೇ ಸ್ಥಳೀಯ ಬ್ಯಾಂಕ್‌ನಲ್ಲಿದ್ದ ಹಣವನ್ನ ಆರ್‌ಬಿಐಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚು ವರ್ಷಗಳ ಕಾಲ ಕಾರ್ಯ ನಿರ್ವಹಿಸದ ಠೇವಣಿಗಳಿಂದ 35 ಸಾವಿರ ಕೋಟಿ ಹಣವನ್ನ ಆರ್‌ಬಿಐಗೆ ವರ್ಗಾವಣೆ ಮಾಡಲಾಗಿದೆ ಎಂದು ಸಂಸತ್ತಿಗೆ ತಿಳಿಸಲಾಗಿದೆ.
ಈ ಬಗ್ಗೆ ಹಣಕಾಸು ಸಚಿವರಾದ ಭಾಗವತ್ ಕರದ್ ಲೋಕಸಭೆಗೆ ತಿಳಿಸಿದ್ದು, 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಬಳಕೆಯಾಗದ ಬ್ಯಾಂಕ್ ಠೇವಣಿಯಿಂದ ಈ ಹಣಗಳನ್ನು ಆರ್ ಬಿ ಐಗೆ ವರ್ಗಾಯಿಸಲಾಗಿದೆ. ಎಸ್‌ಬಿಐ ಬ್ಯಾಂಕ್ ವಾರುಸುದಾರರಿಲ್ಲದ 8,086 ಠೇವಣಿಗಳನ್ನು ಹೊಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, 5,340 ಕೋಟಿ, ಕೆನರಾ ಬ್ಯಾಂಕ್ 4,558 ಕೋಟಿ, ಬ್ಯಾಂಕ್ ಆಫ್ ಬರೋಡಾ, 3,904 ಕೋಟಿ ವಾರಸುದಾರರಿಲ್ಲದ ಠೇವಣಿಯನ್ನ ಹೊಂದಿದೆ.
ಎಸ್‌ಬಿಐನಲ್ಲಿ ಬರೀ ನೂರು ರೂಪಾಯಿ ಇದೆ. ಸಾವಿರ ರೂಪಾಯಿ ಇದೆ ಎಂದು ನಿರ್ಲಕ್ಷ್ಯ ಮಾಡಿದವರ ಹಣವೂ ಇದೆ. ಇವೆಲ್ಲವೂ ಸೇರಿ 35ಸಾವಿರ ಕೋಟಿ ರೂಪಾಯಿ ವರ್ಗಾವಣೆಯಾಗಿದೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ-ಅನಿತಾ ಕುಮಾರಸ್ವಾಮಿ