ಉತ್ತರ ಪ್ರದೇಶ: ನೀರಿನ ಹೊಂಡದಲ್ಲಿ ಈಜಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ನಾಲ್ವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಬಾಲ್ ನಲ್ಲಿ ನಡೆದಿದೆ.
ನಿನ್ನೆ ಸಂಜೆ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ನೀರಿನಲ್ಲಿ ನಾಲ್ವರು ಮಕ್ಕಳ ಈಜಾಡುತ್ತಿದ್ದರು. ಈ ವೇಳೆ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಪಸರಿಸಿದ ಪರಿಣಾಮ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇದನ್ನು ಕಂಡ ದಾರಿಹೋಕ ಕೂಡಲೇ ವಿದ್ಯುತ್ ಕಡಿತಗೊಳಿಸಿ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಕ್ಕಳು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಮೃತರನ್ನು ವಿಷ್ಣು(11), ಶಿವಂ(7), ಧರ್ಮವೀರ್(11) ಮತ್ತು ಗಣೇಶ್(11) ಎಂದು ಗುರುತಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಮಕ್ಕಳ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಪರಿಸ್ಥಿತಿ ಹೀಗೇ ಆದ್ರೆ ರಾಜ್ಯದ ಮುಂದಿನ ಗತಿಯೇನು..??ಮಿಸ್ ಮಾಡದೇ ಈ ವಿಡಿಯೋ ನೋಡಿ