Saturday, March 22, 2025

Latest Posts

ನಾಲ್ವರು ನರ್ಸ್ ಗಳ ಕೆಲಸಕ್ಕೆ ಕುತ್ತು ತಂದ ಟಿಕ್ ಟಾಕ್..!

- Advertisement -

ಒಡಿಶಾ: ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದ್ದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ನರ್ಸ್ ಗಳ ಕೆಲಸಕ್ಕೆ ಸಂಚಕಾರ ಎದುರಾಗಿದೆ.

ಒಡಿಶಾದ ಮಾಲ್ಕನ್ ಗಿರಿ ಜಿಲ್ಲಾ ಪ್ರಧಾನ ಕಚೇರಿಯ ಆಸ್ಪತ್ರೆಯ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ನಾಲ್ವರು ದಾದಿಯರು ಟಿಕ್ ಟಾಕ್ ವಿಡಿಯೋ ಮಾಡಿದ್ರು. ರೋಗಿಗಳತ್ತ ಗಮನಹರಿಸದೆ ಕರ್ತವ್ಯದ ಮೇಲಿದ್ದ ನರ್ಸ್ ಗಳು ಯೂನಿಫಾರ್ಮ್ ತೊಟ್ಟು ಥೈತಕಾ ಅಂತ ಟಿಕ್ ಟಾಕ್ ವಿಡಿಯೋ ನೆಪದಲ್ಲಿ ತೀವ್ರ ನಿಗಾಘಟಕದಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಅವರ ಗ್ರಹಚಾರ ಕೆಟ್ಟಿತು. ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ನಾಲ್ವರು ದಾದಿಯರನ್ನು ಅನಿರ್ಧಿಷ್ಟಾವಧಿವರೆಗೂ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ.

ಇನ್ನು ಈ ಘಟನೆ ಕುರಿತು ಒಡಿಶಾದ ಆರೋಗ್ಯ ಸಚಿವರಾದ ನಬಾ ಕಿಶೋರ್ ದಾಸ್ ಕೂಡ ಘಟನೆ ಬಗ್ಗೆ ವರದಿ ಕೇಳಿದ್ದಾರೆ. ಇನ್ನು ತಾವು ಇನ್ನೆಂದು ಇಂಥಹಾ ತಪ್ಪು ಮಾಡೋದಿಲ್ಲ ಅಂತ ಇವತ್ತು ನಾಲ್ವರು ದಾದಿಯರು ತಪ್ಪೊಪ್ಪಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಟೈಮ್ ಪಾಸ್ ಮಾಡಲೋದ ದಾದಿಯರು ಇದೀಗ ಇರೋ ಕೆಲಸವನ್ನೂ ಕಳೆದುಕೊಳ್ಳೋ ಭೀತಿಯಲ್ಲೇ ಇದೀಗ ಕೆಲಸವಿಲ್ಲದೆ ಟೈಮ್ ಪಾಸ್ ಮಾಡುತ್ತಿರೋದು ವಿಪರ್ಯಾಸವೇ ಸರಿ.

ಗಗನಕ್ಕೇರಿದೆ ಚಿನ್ನದ ಬೆಲೆ..!ಆಷಾಢಕ್ಕಾದ್ರೂ ಇಳಿಯುತ್ತಾ ರೇಟು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=axQ1xqes1mY
- Advertisement -

Latest Posts

Don't Miss