ನವದೆಹಲಿ: ನರೇಂದ್ರ ಮೋದಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ಇದರ ಜೊತೆಗೆ ಕೇಂದ್ರ ಸಂಪುಟಕ್ಕೆ ಸಚಿವರನ್ನೂ ಆಯ್ಕೆ ಮಾಡಲಾಗಿದ್ದು, ರಾಜ್ಯದ 4 ಮಂತಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಘಟಾನುಘಟಿಗಳಿಗೆ ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ಸ್ಥಾನ ನೀಡಿದೆ. ಕಳೆದ ಬಾರಿ ಸಚಿವ ಸಂಪುಟದಲ್ಲಿದ್ದ ಶೇ.70 ರಷ್ಚು ಮಂದಿಗೆ ಈ ಬಾರಿಯೂ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ. ಈ ಪೈಕಿ ರಾಜ್ಯದ ಸುರೇಶ್ ಅಂಗಡಿ, ಡಿ.ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಮತ್ತು ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಗೆ ಮಣೆ ಹಾಕಲಾಗಿದೆ.
ಇನ್ನುಳಿದಂತೆ ರಾಜನಾಥ್ ಸಿಂಗ್, ಪ್ರಕಾಶ್ ಜಾವಡೇಕರ್, ಸುಷ್ಮಾ ಸ್ವರಾಜ್, ಮುಕ್ತಾರ್ ಅಬ್ಬಾಸ್ ನಕ್ವಿ, ಬಾಬುಲ್ ಸುಪ್ರಿಯೋ , ಅರ್ಜುನ್ ಮೇಘಾವಾಲ್, ಪಿಯೂಶ್ ಗೋಯಲ್, ಆರ್.ಕೆ ಸಿಂಗ್, ಜಿತೇಂದರ್ ಸಿಂಗ್, ಧರ್ಮೇಂದ್ರ ಪ್ರಧಾನ್, ರಾಮ್ ದಾಸ್ ಅಠಾವಳೆ , ರಾಮ್ ವಿಲಾಸ್ ಪಾಸ್ವಾನ್, ಕಿರಣ್ ರಿಜಿಜು, ಕಿಶನ್ ರೆಡ್ಡಿ, ಪುರುಷೋತ್ತಮ್ ರೂಪಾಲ, ಸಂಜೀವ್ ಬಾಲ್ಯಾನ್, ಅನುಪ್ರಿಯಾ ಪಟೇಲ್, ಕೈಲಾಶ್ ಚೌಧರಿ, ಇಂದ್ರಜೀತ್ ರಾವ್, ಹರಿಸಿಮ್ರತ್ ಕೌಲ್, ರವೀಂದ್ರನ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಮನ್ ಸುಖ್ ಮಾಂಡವಿಯಾ, ಗಿರಿರಾಜ್ ಸಿಂಗ್ ಕೂಡ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಶೋಭಕ್ಕನನ್ನು ಕೇಂದ್ರ ಮಂತ್ರಿ ಮಾಡುವ ಯಡಿಯೂರಪ್ಪನ ಪಣ ಏನಾಯ್ತು…? ಮಿಸ್ ಮಾಡದೇ ಈ ವಿಡಿಯೋ ನೋಡಿ.