Tuesday, October 15, 2024

Latest Posts

ಸುಮಕ್ಕ, ಅಭಿಗೆ ಜಾಗ್ವಾರ್ ವಿಶ್- ಮಂಡ್ಯ ಅಭಿವೃದ್ಧಿಗೆ ಸದಾ ಸಿದ್ದ ಎಂದ ನಿಖಿಲ್….!

- Advertisement -

ಬೆಂಗಳೂರು: ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಜರ್ಜರಿತರಾಗಿ ಮೌನಕ್ಕೆ ಶರಣಾಗಿದ್ದ ಮಂಡ್ಯದಿಂದ ಸೋತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಸೋಲು ಗೆಲುವು ಸಹಜ, ಇನ್ನು ಮುಂದೆ ನಾನು ಮಂಡ್ಯದ ಅಭಿವೃದ್ಧಿಗಾಗಿ, ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬೋದಕ್ಕೆ ಶ್ರಮವಹಿಸಿ ಕೆಲಸ ಮಾಡ್ತೇನೆ ಅಂತ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರೋ ನಿಖಿಲ್ ಕುಮಾರ್, ನಾಳೆ ರಿಲೀಸ್ ಆಗ್ತಿರೋ ನನ್ನ ಸಹೋದರ ಅಭಿ ನಟನೆಯ ಅಮರ್ ಚಿತ್ರ ಸಕ್ಸಸ್ ಆಗಲಿ ಅಂತ ನಾನು ಈ ಮೂಲಕ ಹಾರೈಸುತ್ತಿದ್ದೇನೆ. ಆತ ಚಿತ್ರವನ್ನ ತುಂಬಾ ಚೆನ್ನಾಗಿ ಮುನ್ನೆಡೆಸಿಕೊಂಡು ಬಂದಿದ್ದಾನೆ ಅಂತ ನಾನು ನಂಬಿದ್ದೇನೆ. ನಾನು ಕೇವಲ ಸೋಷಿಯಲ್ ಮೀಡಿಯಾದಲ್ಲಿ ತೋರ್ಪಡಿಸೋಕೆ ಮಾತ್ರ ವಿಶ್ ಮಾಡ್ತಿದ್ದೇನೆ ಅಂತ ಅಂದುಕೊಳ್ಳೋವ್ರಿಗೆ ನಾನು ಒಂದು ವಿಷ್ಯ ಹೇಳೋಕೆ ಇಷ್ಟಪಡ್ತೀನಿ. ನಾನು ಚುನಾವಣಾ ಪ್ರಚಾರ ಮಾಡ್ತಿದ್ದ ವೇಳೆ ಯಾವಾಗಲೂ ಹೇಳುತ್ತಿದ್ದಂತೆ ಈಗಲೂ ಹೇಳುತ್ತಿದ್ದೇನೆ. ನಾನು ಸದಾ ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿ. ಇನ್ನು ಚುನಾವಣೆಯಲ್ಲಿ ಗೆದ್ದಿರೋ ಸುಮಕ್ಕಾರಿಗೆ ನನ್ನ ಅಭಿನಂದನೆಗಳು. ನಾನು ಸದಾ ಮಂಡ್ಯದ ಅಭಿವೃದ್ಧಿಗಾಗಿ ಕೈ ಜೋಡಿಸಲು ಸಿದ್ಧನಿದ್ದೇನೆ. ಇನ್ನು ಮಂಡ್ಯ ಚುನಾವಣೆ ಫಲಿತಾಂಶದಲ್ಲಿ ನನ್ನ ಸೋಲಿನ ಸಂಪೂರ್ಣ ಜವಾಬ್ದಾರಿ ಕೇವಲ ನನ್ನದು ಮಾತ್ರ. ಇದು ನನ್ನ ತಂದೆ ಸಿಎಂ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ದೇವೇಗೌಡರಾಗಲೀ, ಎಂಎಲ್ ಸಿಗಳಾಗಲಿ, ಕಾರ್ಯಕರ್ತರನ್ನಾಗಲಿ, ಯಾರನ್ನೂ ದೂರಬೇಡಿ. ಫಲಿತಾಂಶದ ಮೂಲಕ ಎಲ್ಲಾ ಕಾರ್ಯಕರ್ತರಲ್ಲೂ ಬೇಸರ ಮೂಡಿಸಿದ್ದಕ್ಕಾಗಿ ಕ್ಷಮೆ ಕೋರಲು ಇಚ್ಛಿಸುತ್ತೇನೆ. ಜನ ಸುಖಾಸುಮ್ಮನೆ ನಿಖಿಲ್ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆಯೋ ಹೊರತು ಬೇರೆಯಾರನ್ನೂ ಅಲ್ಲ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿಯವರು ಮಂಡ್ಯ ಅಭಿವೃದ್ಧಿಗಾಗಿ ಈ ವರ್ಷದ ಬಜೆಟ್ ನಲ್ಲಿ 8671 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ಕೆಲಸಗಳಿಂದ ಎಲ್ಲಾ ಬೇಸರಗಳಿಗೂ ತಾರ್ಕಿಕ ಅಂತ್ಯ ಹಾಡಲಿದೆ ಅಂತ ನಂಬಿರುವೆ ಯಾಕಂದ್ರೆ ಮಂಡ್ಯ ಅಭಿವೃದ್ಧಿಯೇ ನಮ್ಮ ಕರ್ತವ್ಯ. ನನ್ನ ಮೇಲೆ ಭರವಸೆ ಇಟ್ಟು 5,76,400 ಮತ ಹಾಕಿದ ಮಂಡ್ಯ ಜನತೆ ನನ್ನ ವಂದನೆಗಳು. ಇನ್ನುಳಿದ ಜನತೆಯ ವಿಶ್ವಾಸ ಗಳಿಸೋ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ.

ತಾಂತ್ರಿಕವಾಗಿ ನಾನು ಈ ಚುನಾವಣೆಯಲ್ಲಿ ಸೋತಿದ್ದೇನೆ ನಿಜ. ಆದ್ರೆ ಈ ಪಯಣದಲ್ಲಿ ನಾನು ಗಳಿಸಿದ್ದು ಸಾಕಷ್ಟು, ಮೊದಲ ದಿನದಿಂದಲೂ ನಾನು ಸಕಾರಾತ್ಮಕ ವ್ಯಕ್ತಿಯಾಗಿದ್ದೇನೆ. ಇನ್ನು ನಿಖಿಲ್ ಕುಮಾರಸ್ವಾಮಿ ಓರ್ವ ಭರವಸೆಯ ರಾಜಕಾರಣಿ ಆಗ್ತಾನಾ ಅಂತ ಪ್ರಶ್ನೆ ಇಟ್ಟಿಕೊಂಡಿರೋ ಜನರಿಗೆ ನಾನು ರಾಜ್ಯದ ಪ್ರತಿ ಜಿಲ್ಲೆಗೂ ಪ್ರವಾಸ ಕೈಗೊಂಡು ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳೋ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬೋ ಕೆಲಸ ಮಾಡೋ ಮೂಲಕ ಉತ್ತರಿಸುತ್ತೇನೆ.

ಈ ಬಗ್ಗೆ ಇನ್ನೂ ಸಂಪೂರ್ಣವಾಗಿ ಮಾತನಾಡೋದಿದೆ. ಇದಕ್ಕಾಗಿ  ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಸಹಕಾರಕ್ಕಾಗಿ ನನ್ನ ವಂದನೆಗಳು ಅಂತ ನಿಖಿಲ್ ಕುಮಾರ್ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

https://www.instagram.com/p/ByE3AIbHwi7/?utm_source=ig_web_copy_link
- Advertisement -

Latest Posts

Don't Miss