Tuesday, April 30, 2024

Latest Posts

ಡಿಸೆಂಬರ್ 31ಕ್ಕೆ ತೆರೆಕಾಣಲಿವೆ ಬರೋಬ್ಬರಿ 4ಚಿತ್ರಗಳು..!

- Advertisement -

www.karnatakatv.net:ಕೊರೊನ ಅಲೆ ಕಮ್ಮಿಯಾಗಿ ಶೇಕಡ100 ರಷ್ಟು ಆಸನಕ್ಕೆ ಸರ್ಕಾರ ಸೂಚನೆ ನೀಡಿದ್ದೆ ನೀಡಿದ್ದು, ಒಂದರಿoದೆ ಒಂದರoತೆ ಸಿನಿಮಾಗಳು ತೆರೆಕಾಣುತ್ತಿವೆ. ಅಕ್ಟೊಬರ್ 8 ರಿಂದ ಇಲ್ಲಿಯವರೆಗೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದೆ ದಿನ ಇಬ್ಬರು ಹಿರೋಗಳ ಸಿನಿಮಾ ತೆರೆಗಪ್ಪಳಿಸುತ್ತಿದ್ದವು, ಆದರೆ ಈ ಬಾರಿ ಒಂದೆ ದಿನ 4 ಹಿರೋಗಳ ಸಿನಿಮಾ ಒಂದೆ ದಿನ ತೆರೆಗಪ್ಪಳಿಸಲಿವೆ.

ಮುಖ್ಯವಾಗಿ, ದೂದ್‌ಪೇಡ ದಿಗಂತ್ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’. ಲೂಸ್ ಮಾದ ಯೋಗಿ ನಟನೆಯ ‘ಒಂಬತ್ತನೆಯ ದಿಕ್ಕು’, ಅಜಯ್‌ರಾವ್ ನಾಯಕನಾಗಿ ನಟಿಸಿರುವ ‘ಲವ್ ಯು ರಚ್ಚು’, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಮುಖ್ಯಭೂಮಿಕೆಯ ‘ಅರ್ಜುನ್ ಗೌಡ’ ಸಿನಿಮಾಗಳು ಒಂದೆದಿನ ರಿಲೀಸ್ ಆಗಲಿವೆ ಎನ್ನುವಂತಹ ಸುದ್ದಿಗಳು ಕೇಳಿಬರುತ್ತಿವೆ. ಇವಷ್ಟೆ ಅಲ್ಲದೆ ಇನ್ನೂ ಕೆಲವು ಸಿನಿಮಾಗಳು ಡಿಸೆಂಬರ್ 31ಕ್ಕೆ ತಮ್ಮ ಸಿನಿಮಾ ಬಿಡುಗಡೆ ಮಾಡಲು ಚಿಂತಿಸುತ್ತಿವೇ, ಆದರೇ ಚಿತ್ರಮಂದಿರಗಳ ಕೊರತೆಯಿಂದಾಗಿ ಸುಮ್ಮನಾಗಿವೇ ಎನ್ನಲಾಗುತ್ತಿದೆ.

ಹುಟ್ಟುಹಬ್ಬದ ಶುಭಾಶಯಗಳು.
ದಿಗಂತ್ ನಾಯಕನಾಗಿ ನಟಿಸಿರುವ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಎಲ್ಲಾ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಈಗ ಚಿತ್ರ ಬಿಡುಗಡೆಗೆಯ ಹಂತಕ್ಕೆ ಬಂದಿದೆ.ಡಿಸೆoಬರ್ 31ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ದೊಡ್ಡ ಬ್ರೇಕ್‌ನ ನಂತರ ದಿಗಂತ್ ಸಿನಿಮಾವೊಂದು ತೆರೆಕಂಡತಾಗುತ್ತದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾದಡಿ ಟಿ,ಆರ್,ಚಂದ್ರಶೇಖರ್ ಚಿತ್ರವನ್ನು ನಿರ್ಮಿಸಿದ್ದಾರೆ. ನಾಗರಾಜ್ ಬೇತೂರು ಸಿನಿಮಾವನ್ನು ನಿರ್ದೇಶಿಸಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲೆರ್ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ ಕುತೂಹಲ ಸೃಷ್ಠಿಸಿದೆ. ಸಿನಿಮಾದಲ್ಲಿ ದಿಗಂತ್ ಪಾತ್ರ ವಿಭಿನ್ನವಾಗಿದ್ದು,ಅವರ ಕೆರಿಯರ್‌ಗೆ ಬ್ರೇಕ್ ನೀಡಲಿದೆ. ಇನ್ನೂ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ, ಅಭಿಲಾಶ್ ಛಾಯಾಗ್ರಹಣವಿದೆ.

ಒಂಬತ್ತನೇ ದಿಕ್ಕು.
ದಯಾಳ್ ಪದ್ಮನಾಭನ್ ಈ ಚಿತ್ರವನ್ನು ನಿರ್ದೇಶಿಸಿದ್ದು ಡಿ.31ಕ್ಕೆ ತೆರೆ ಮೇಲೆ ತರುವ ಪ್ಲಾನ್ ನಲ್ಲಿದ್ದಾರೆ. ಹೊಸಥರದ ಸಬ್ಜೆಕ್ಟ್ ನ ಸಿನಿಮಾ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದಾಗ ಈ ಸಿನಿಮಾ ಮಾಡುವ ಐಡಿಯಾ ಬಂತು. ಇಂದಿನ ಸ್ಟೈಲ್ನ ಪಕ್ಕಾ ಕಮರ್ಶಿಯಲ್ ಎಲಿಮೆಂಟ್ಸ್ ಇರುವ ಆಕ್ಷನ್ ಕಂ ಕ್ರೈಂ-ಥ್ರಿಲ್ಲೆರ್ ಸಬ್ಜೆಕ್ಟ್ ಸಿನಿಮಾ. ನಮ್ಮ ಕಾನೂನಿಲ್ಲಿ ಬರುವ ಸೆನ್ಸಿಟಿವ್ ವಿಷಯವೊಂದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಅದೇನು ಅನ್ನೋದನ್ನು ಸ್ಕ್ರೀನ್ ಮೇಲೆ ನೋಡ್ಬೇಕು. ಒಂದು ದಿನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆಯನ್ನು ತೆರೆ ಮೇಲೆ ಹೇಳಿದ್ದೇವೆ ಎಂದು ನಿರ್ದೇಶಕ ದಯಾಳ್ ಹೇಳಿದ್ದಾರೆ. ಇನ್ನೂ ಚಿತ್ರದಲ್ಲಿ ಲೂಸ್‌ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

ಲವ್ ಯು ರಚ್ಚು.
ಗುರುದೇಶಪಾಂಡೆ ನಿರ್ಮಾಣದಲ್ಲಿ ತಯಾರಾಗಿರುವ `ಲವ್ ಯು ರಚ್ಚು’ ಸಿನಿಮಾದ ಪ್ರಚಾರದ ಕಾರ್ಯಗಳು ಈಗಾಗಲೇ ಶುರುವಾಗಿದೆ. ಇದೇ ತಿಂಗಳ 16ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈ ಚಿತ್ರದ ಹಾಡುಗಳು ಈಗಾಗಲೆ ಸದ್ದು ಮಾಡುತ್ತಿದ್ದು, ಮತ್ತೊಂದೆಡೆ ಅದೇ ಹಾಡಿನಲ್ಲಿ ರಚಿತಾರಾಮ್ ಮತ್ತು ಅಜಯ್ ರಾವ್ ಜೋಡಿಯು ಆನ್‌ಸ್ಕ್ರೀನ್ ನ್ ಕೆಮಿಸ್ಟ್ರಿಕೂಡ ಜೋರಾಗಿ ಸೌಂಡ್ ಮಾಡುತ್ತಿದೆ. ಹಾಗೆಯೇ ರಚಿತಾ ಅವರ ಕೆಲಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಇದೆಲ್ಲವು ಚಿತ್ರಕ್ಕೆ ಪ್ಲಸ್ ಆಗಿದೆ.

ಅರ್ಜುನ್ ಗೌಡ.
ಪ್ರಜ್ವಲ್ ನಟನೆಯ ಅರ್ಜುನ್ ಗೌಡ ಸಿನಿಮಾ, ಇದು ನಿರ್ಮಾಪಕ ರಾಮು ಅವರ ಕನಸಿನ ಚಿತ್ರ. ಈ ಸಿನಿಮಾದಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ರಾಮು ಅವರು, ಈ ಚಿತ್ರದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ,ಕನಸು ನನಸಾಗುವ ಮುನ್ನವೇ ಕೊರೋನಾ ಕಾರಣದಿಂದ ರಾಮು ನಿಧನರಾದರು. ಈಗ ಇ ಕನಸನ್ನು ನನಸು ಮಾಡಲು ಅವರ ಪತ್ನಿ ಮಾಲಾಶ್ರೀ ಮುಂದಾಗಿದ್ದಾರೆ. ಈ ಚಿತ್ರವನ್ನು ಈಗ ಅದ್ಧೂರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸುಕೊಳ್ಳುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕ ತಿಮ್ಮೇಶ್ ನಟನೆಯ ಈ ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ರಿಲೀಸ್ ಆಗಿದ್ದು, ಸುಮಾರು 200ಕ್ಕೂ ಹೆಚ್ಚು ತಂತ್ರಜ್ಞಾನ ಬಳಸಿಕೊಂಡು ಅರ್ಜುನ್ ಗೌಡ ಚಿತ್ರದ ರೀ-ರೆಕಾರ್ಡಿಂಗ್ ಕಾರ್ಯಗಳನ್ನು ಬೆಂಗಳೂರು ಮಾತ್ರವಲ್ಲದೆ ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತದ ಪ್ರಸಿದ್ದ ಸ್ಟುಡಿಯೋಗಳಲ್ಲಿ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

- Advertisement -

Latest Posts

Don't Miss