ಮುಂಬೈ: 4 ಅಂತಸ್ಥಿನ ಕಟ್ಟಡ ಕುಸಿದು 40-50ಮಂದಿ ಅವಶೇಷದಡಿ ಸಿಲುಕಿರುವ ಘಟನೆ ಮುಂಬೈನ ವಸತಿ ಪ್ರದೇಶ ಡೋಂಗ್ರಿಯಲ್ಲಿ ನಡೆದಿದೆ.
ಮಹಾನಗರಿ ಮುಂಬೈನ ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಡೋಂಗ್ರಿ ಪ್ರದೇಶದ ತಂದೇಲ್ ಸ್ಟ್ರೀಟ್ ನಲ್ಲಿ ಈ ದುರ್ಘಟನೆ ನಡೆದಿದ್ದು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೇಸರ್ ಭಾಯ್ ಹೆಸರಿನ ನಾಲ್ಕು ಅಂತಸ್ಥಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡದಲ್ಲಿ ಸುಮಾರು 40-50 ಮಂದಿ ಇದ್ದರೆಂಬ ಮಾಹಿತಿ ಇದ್ದು, ಅವಶೇಷದ ಅಡಿ ಸಿಲುಕಿ ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದೀಗ ಕುಸಿದು ಬಿದ್ದಿರುವ ಕಟ್ಟಡ ತೀರಾ ಹಳೆಯದ್ದಾಗಿತ್ತು ಅಂತ ಹೇಳಲಾಗಿದ್ದು, ಇತ್ತೀಚೆಗೆ ಮುಂಬೈನಲ್ಲಿ ಸುರಿದ ಮಹಾಮಳೆಗೆ ಮತ್ತಷ್ಟು ಶಿಥಿಲಾವಸ್ಥೆ ತಲುಪಿತ್ತು ಅಂತ ತಿಳಿದುಬಂದಿದೆ.
ಸಿಂಗಂ ಅಣ್ಣಾಮಲೈ ರಾಜೀನಾಮೆಗೆ ಕಾರಣವಾಯ್ತು ಮಹಿಳೆಯ ಆ ಒಂದು ದೂರು…!! ಮಿಸ್ ಮಾಡದೇ ಈ ವಿಡಿಯೋ ನೋಡಿ