Saturday, April 5, 2025

Latest Posts

411ನೇ ದಸರಾಗೆ ವಿದ್ಯುಕ್ತ ಚಾಲನೆ

- Advertisement -

ಮೈೂಸೂರು: 411ನೇ ನಾಡಹಬ್ಬ ದಸರಾವನ್ನು ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಉದ್ಘಾಟಿಸಿದರು.

ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅಗ್ರಪೂಜೆಯೊಂದಿಗೆ ಬೆಳಗ್ಗೆ 8.15ರಿಂದ 8.45ರ ಸಲ್ಲುವ ಶುಭ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ದಸರಾಗೆ ಅಧಿಕೃತ ಚಾಲನೆ ನೀಡಿದ್ರು.  ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸಜ ಪ್ರತಾಪ್ ಸಿಂಹ, ಸಚಿವ ಎಸ್.ಟಿ ಸೋಮಶೇಖರ್, ಜಿ.ಟಿ ದೇವೇಗೌಡ, ಮಾಜಿ ಸಚಿವ ರಾಮದಾಸ್, ಆರ್.ಅಶೋಕ್, ಸಚಿವ ನಾರಾಯಣಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ರು.

ಇನ್ನು ದಸರಾ ಉದ್ಘಾಟಿಸಿ ಮಾತನಾಡಿದ ಎಸ್.ಎಂ ಕೃಷ್ಣಾ,  ದಸರಾವನ್ನು ಉದ್ಘಾಟಿಸಿ ಕೊರೊನಾದಿಂದ ಈ ಮನುಕುಲವನ್ನು ರಕ್ಷಿಸುವಂತೆ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಮಾಡಿದ್ದೇವೆ. ದಸರಾ ಉದ್ಘಾಟನೆಗೆ ಅವಕಾಶ ನೀಡಿ ನನ್ನನ್ನು ಅತ್ಯಂತ ವಿಶ್ವಾಸದಿಂದ, ಅನಿರೀಕ್ಷಿತವಾಗಿ ಈ ಗೌರವಕ್ಕೆ ಪಾತ್ರರಾಗಿ ಮಾಡಿಕೊಟ್ಟಿದ್ದೀರಿ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆ ಧನ್ಯವಾದ ತಿಳಿಸಿದ್ರು.

ಕರ್ನಾಟಕ ಟಿವಿ, ಮೈಸೂರು

- Advertisement -

Latest Posts

Don't Miss