ಕೀನ್ಯಾ: ಆಫ್ರಿಕಾದ ಕೀನ್ಯಾದಲ್ಲಿ ಪಾದ್ರಿಯ ಜಮೀನಿನಲ್ಲಿ 47 ಶವಗಳು ಪತ್ತೆಯಾಗಿದೆ. ಇನ್ನೂ ಹೆಚ್ಚು ಶವಗಳು ಪತ್ತೆಯಾಗುವ ಶಂಕೆಯನ್ನ ಸ್ಥಳೀಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಇದರ ತನಿಖೆ ನಡೆಸಿದಾಗ, ಸತ್ಯಸಂಗತಿ ಹೊರಬಿದ್ದಿದೆ. ಪಾದ್ರಿ ಕೆಲ ಅಮಾಯಕರನ್ನ ಸ್ವರ್ಗಕ್ಕೆ ಕಳುಹಿಸುವುದಾಗಿ ನಂಬಿಸಿದ್ದನಂತೆ. ಅವನ ಮಾತಿಗೆ ಮರುಳಾದ ಜನ, ಅವನು ಹೇಳಿದಂತೆ ಮಾಡಿದ್ದಾರೆ. ಬಳಿಕ ಸಾವನ್ನಪ್ಪಿದ್ದಾರೆ. ಆ ಹೆಣಗಳನ್ನ ಪಾದ್ರಿ, ತನ್ನದೇ ಜಮೀನಿನಲ್ಲಿ ಹೂತು ಹಾಕಿದ್ದಾನೆ.
ಕೆಲ ಜನರಿಗೆ ನೀವು ಸ್ವರ್ಗಕ್ಕೆ ಹೋಗಬೇಕೆಂದರೆ, ಏಸುವನ್ನು ಭೇಟಿ ಮಾಡಬೇಕೆಂದರೆ, ಕೆಲ ದಿನ ಉಪವಾಸ ಮಾಡಿ, ನಂತರ ಜೀವಂತ ಸಮಾಧಿಯಾಗಿ. ಹೀಗೆ ಮಾಡಿದ್ದಲ್ಲಿ ನೀವು ಸ್ವರ್ಗಕ್ಕೆ ಹೋಗುತ್ತೀರಿ ಎಂದು ಹೇಳಿ, ಪಾದ್ರಿ ಕೆಲ ಜನರಿಗೆ ನಂಬಿಸಿದ್ದನಂತೆ. ಪಾದ್ರಿಯನ್ನು ನಂಬಿದ ಅಮಾಯಕರು ಸ್ವರ್ಗಕ್ಕೆ ಹೋಗಲು ನಿಶ್ಚಯಿಸಿದ್ದಾರೆ. ಅಂಥವರನ್ನ ತನ್ನ ಜಮೀನಿನಲ್ಲೇ ಇರಿಸಿಕೊಂಡ ಪಾದ್ರಿ, ಅವರು ಉಪವಾಸ ಮಾಡಿ, ಸಾವನ್ನಪ್ಪಿದ ಬಳಿಕ, ಅವರನ್ನ ತನ್ನ ಜಮೀನಿನಲ್ಲೇ ಸಮಾಧಿ ಮಾಡಿದ್ದಾನೆ.
ಹೀಗೆ ಸಾವನ್ನಪ್ಪಿದವರಲ್ಲಿ ಮಕ್ಕಳೂ ಸೇರಿದ್ದಾರೆ. ಸುದ್ದಿ ತಿಳಿದ ತಕ್ಷಣ ಪಾದ್ರಿಯಾದ ಪಾಲ್ ಮೆಕೆಂಜಿಯನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಸಮಾಧಿ ಸ್ಥಳವನ್ನ ಅಗೆಯುತ್ತಿದ್ದಾರೆ. ಈಗ ಸಿಕ್ಕ ಶವಗಳಲ್ಲಿ ಒಂದೇ ಕುಟುಂಬದ ಐವರು ಪತ್ತೆಯಾಗಿದ್ದಾರೆ. ಇನ್ನೂ ಹೆಚ್ಚಿನ ಸಮಾಧಿ ಅಗೆಯಲಾಗುತ್ತದೆ. ಇನ್ನೂ ಹೆಚ್ಚು ಶವ ಸಿಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆ: ಕೆ.ಅಣ್ಣಾಮಲೈ