Friday, July 4, 2025

Latest Posts

ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಕೊವಿಡ್ ಲಸಿಕೆ ರವಾನೆ

- Advertisement -

ನವದೆಹಲಿ: ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಡೋಸ್ ಕೊರೊನಾ ಲಸಿಕೆ ಕಳುಹಿಸಲಾಗಿದೆ. ಮಾನವೀಯತೆ ಆಧಾರದಲ್ಲಿ ಕೊವ್ಯಾಕ್ಸಿನ್ ಕೊವಿಡ್ ಲಸಿಕೆ ಕಳುಹಿಸಲಾಗಿದ್ದು, ಕಾಬೂಲ್​ನಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಲಸಿಕೆಗಳನ್ನು ರವಾನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಲಕ್ಷ ಡೋಸ್ ಕೊವಿಡ್ ಲಸಿಕೆಗಳನ್ನು ರವಾನೆ ಮಾಡಲಾಗುವುದು. ಈಗಾಗಲೇ ಅಫ್ಘಾನಿಸ್ತಾನಕ್ಕೆ ಭಾರತದಿಂದ ಆಹಾರ ಪದಾರ್ಥ, ವೈದ್ಯಕೀಯ ಸಲಕರಣೆಗಳನ್ನು ರವಾನಿಸಲಾಗಿದೆ.

ಭಾರತವು ಇಂದು 5,00,000 ಡೋಸ್ ಕೊವಿಡ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ. ಕಾಬೂಲ್‌ನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಲಸಿಕೆಗಳನ್ನು ಹಸ್ತಾಂತರಿಸಲಾಯಿತು. ಯುದ್ಧ ಪೀಡಿತ ದೇಶಕ್ಕೆ ಮುಂಬರುವ ವಾರಗಳಲ್ಲಿ ಮತ್ತೆ 5 ಲಕ್ಷ ಡೋಸ್‌ ಲಸಿಕೆಗಳನ್ನು ಪೂರೈಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇದಕ್ಕೂ ಮೊದಲು, ಡಿಸೆಂಬರ್ 11ರಂದು, ಭಾರತವು ವಿಶ್ವ ಆರೋಗ್ಯ ಸಂಸ್ಥೆ (WHO) ಮೂಲಕ 1.6 ಮೆಟ್ರಿಕ್ ಟನ್ ಜೀವರಕ್ಷಕ ಔಷಧಗಳನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿತ್ತು. ಔಷಧಿಗಳನ್ನು ದೆಹಲಿಯಿಂದ ರಿಟರ್ನ್ ಕಾಮ್ ಏರ್ ವಿಮಾನದ ಮೂಲಕ ಕಳುಹಿಸಲಾಯಿತು. ಕಾಬೂಲ್‌ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಲಸಿಕೆಗಳನ್ನು ಹಸ್ತಾಂತರಿಸಲಾಯಿತು.

ಮುಂಬರುವ ವಾರಗಳಲ್ಲಿ ನಾವು ಅಫ್ಘಾನಿಸ್ತಾನಕ್ಕೆ ಗೋಧಿ ಪೂರೈಕೆ ಮತ್ತು ಉಳಿದ ವೈದ್ಯಕೀಯ ಸಹಾಯವನ್ನು ಮಾಡುತ್ತೇವೆ. ಆಹಾರ ಧಾನ್ಯಗಳು, ಒಂದು ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಮತ್ತು ಅಗತ್ಯ ಜೀವ ಉಳಿಸುವ ಔಷಧಿಗಳ ಮೂಲಕ ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

- Advertisement -

Latest Posts

Don't Miss