Sunday, April 20, 2025

Latest Posts

5 ವರ್ಷದ ಬಾಲಕನ ಮೇಲೆ ಕಾಮತೀಟೆ ತೀರಿಸಿಕೊಳ್ಳಲು ಯತ್ನಿಸಿದ 55 ವರ್ಷದ ಮುದುಕ

- Advertisement -

Hubli News: ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್‌ಯಕ್ತಿಯೋರ್ವ ಮಾನವಕುಲವೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ. ಪುಟ್ಟ ಮಗುವೆಂದು ನೋಡದೇ, ತನ್ನ ಕಾಮತೀಟೆ ತೀರಿಸಿಕೊಳ್ಳಲು, ಮಗುವಿಗೆ ಹಿಂಸೆ ನೀಡಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಳೇ ಹುಬ್ಬಳ್ಳಿಯ ಮಾರುತಿ ನಗರದ ನಿವಾಸಿ 55 ವರ್ಷದ ಸಿರಾಜ್ ಎಂಬಾತ, 5 ವರ್ಷದ ಪುಟ್ಟ ಬಾಲಕ ಶ್ರೀನಾಥ್ ಎಂಬುವವನನ್ನು ಜ್ಯೂಸ್ ಕೊಡಿಸುವುದಾಗಿ ಹೇಳಿ, ಆಸೆ ತೋರಿಸಿ, ಕರೆದೊಯ್ದಿದ್ದಾನೆ. ಬಳಿಕ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದಾನೆ. ಮಗುವಿನ ಕಿರುಚಾಟ ಕೇಳಿ ಕುಟುಂಬಸ್ಥರು ಮಗುವಿನ ರಕ್ಷಣೆ ಮಾಡಿದ್ದಾರೆ.

ಮಾರುತಿ ನಗರದ ಚೌಹಾನ್ ಲೇಔಟ್ ಬಳಿ ಸರೌನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ಬಾಯಿಗೆ ತನ್ನ ಮರ್ಮಾಂಗವಿಟ್ಟು ವಿಕೃತಿ ಮೆರೆದಿದ್ದಾನೆಂದು ಸಿರಾಜ್ ವಿರುದ್ಘಧ ಆರೋಪ ಕೇಳಿ ಬಂದಿದೆ. ಅಲ್ಲದೇ, ಮಗು ಇದಕ್ಕೆ ಒಪ್ಪದಿದ್ದಕ್ಕೆ, ಅದರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.

ಮಗುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮಗುವಿನ ತಾಯಿ ಆತನನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬ ಸುದ್ದಿ ಬೆಳಕಿಗೆ ಬಂದಿದೆ. ಹಳೇ ಹುಬ್ಬಳ್ಳಿ ಠಾಣೆಗೆ ಹೋಗಿ, ದೂರು ನೀಡಿದರೂ, ಪೊಲೀಸರು ಮಾತ್ರ ದೂರು ಸ್ವೀಕರಿಸದೇ ನಿರ್ಲಕ್ಷ್ಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಇನ್ನು ಈ ಸುದ್ದಿ ತಿಳಿದು ಮಗುವಿನ ಕುಟುಂಬಸ್ಥರ ಬೆನ್ನಿಗೆ ನಿಂತಿರುವ ಜೈ ಭೀಮ್ ಯುವ ಸಂಘಟನೆಯವರು, ಆರೋಪಿಗೆ ಗುಂಡು ಹೊಡೆಯಿರಿ ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಮಗುವಿನ ತಾಯಿ ಕೂಡ ದೌರ್ಜನ್ಯ ಎಸಗಿರುವ ಆರೋಪಿಗೆ ಶಿಕ್ಷೆ ನೀಡಲು ಒತ್ತಾಯಿಸಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹಾಗೂ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest Posts

Don't Miss