Thursday, May 8, 2025

Latest Posts

55 ವರ್ಷದ ಕಾಂಗ್ರೆಸ್ ನಂಟು ತೊರೆದು ಶಿವಸೇನೆ ಸೇರಿದ ಮಿಲಿಂದ್ ದಿಯೋರಾ

- Advertisement -

National Political News: ಮಿಲಿಂದ್ ದಿಯೋರಾ ಎಂಬ ಕಾಂಗ್ರೆಸ್ ನಾಯಕ, 55 ವರ್ಷದ ಕಾಂಗ್ರೆಸ್ ನಂಟನ್ನು ತೊರೆದು, ಶಿವಸೇನೆ ಸೇರಿದ್ದಾರೆ.

ಇಂದು ಬೆಳಿಗ್ಗೆಯಷ್ಟೇ ನಾನು 55 ವರ್ಷದ ಕಾಂಗ್ರೆಸ್ ನಂಟನ್ನು ತೊರೆಯುತ್ತಿದ್ದೇನೆ ಎಂದು ಮಿಲಿಂದ್ ಹೇಳಿದ್ದರು. ಅಲ್ಲದೇ, ಮಿಲಿಂದ್‌ ಅವರು ಶಿವಸೇನೆಗೆ ಬರುವುದಿದ್ದರೆ, ನಾನು ಯಾವಾಗಲೂ ಸ್ವಾಗತಿಸುತ್ತೇನೆ ಅಂತಲೂ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದ್ದರು. ಈ ಹೇಳಿಕೆಗಳನ್ನು ಕೊಟ್ಟು ಕೆಲ ಗಂಟೆಗಳಲ್ಲೇ, ಮಿಲಿಂದ್ ಶಿವಸೇನೆ ಸೇರ್ಪಡೆಯಾಗಿದ್ದಾರೆ.

ಏಕನಾಥ್ ಶಿಂಧೆ ಮತ್ತು ಅವರ ಬಳಗದವರ ಸಮ್ಮುಖದಲ್ಲಿ, ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿ, ಹೂಗುಚ್ಛ ನೀಡಿ, ಮಿಲಿಂದ್ ಅವರನ್ನು ಶಿವಸೇನೆಗೆ ಬರಮಾಡಿಕೊಳ್ಳಲಾಯಿತು. ಇನ್ನು ಶಿವಸೇನೆ ಸೇರುವುದಕ್ಕೂ ಮುನ್ನ ಮಿಲಿಂದ್ ಕುಟುಂಬ ಸಮೇತರಾಗಿ ಮುಂಬೈನ ಶ್ರೀ ಸಿದ್ಧಿವಿನಾಯಕನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

- Advertisement -

Latest Posts

Don't Miss