Hubballi News: ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ 34 ರಲ್ಲಿ, ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೂಮಿಪೂಜೆ ನೇರವೇರಿಸಿದ್ದಾರೆ.
ವಾರ್ಡ್ 34 ರ ಸದಸ್ಯರಾದ ಮಂಗಳಮ್ಮ ಗೌರಿ ಅವರ ಅನುದಾನದಲ್ಲಿ, 8.65 ಕೋಟಿ ವೆಚ್ಚದಲ್ಲಿ, 8 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ 34 ನೇ ವಾರ್ಡನಲ್ಲಿ ಅನೇಕ ಸಮಸ್ಯೆಗಳಿದ್ದು, ಜನರು ಸಮಸ್ಯೆ ಪರಿಹರಿಸಲು ದುಂಬಾಲು ಬಿದಿದ್ದರು. ಅದರಂತೆ ಪಾಲಿಕೆ ಸದಸ್ಯೆ ಮಂಗಳಮ್ಮ ಗೌರಿ ಅವರ ಅನುದಾನದಡಿಯಲ್ಲಿ ದೇವರಗುಡಿಹಾಳ ರಸ್ತೆಯ ಡಾಂಬರೀಕರಣ, ಸುಭಾಷ್ ನಗರದಲ್ಲಿ ಕಾಂಕ್ರೀಟ್ ರಸ್ತೆ, ಆನಂದನಗರದ ಮುಖ್ಯರಸ್ತೆಯ ಚರಂಡಿಗೆ ಸ್ಲ್ಯಾಬ್, ಶೋಲ್ಡರ್, ಪೆವರ್ಸ್ ಅಳವಡಿಕೆ, ಹೀಗೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಒಟ್ಟಿನಲ್ಲಿ ಸಮಸ್ಯೆಗಳ ಬೀಡಾಗಿದ್ದ ವಾರ್ಡ್ ನಂಬರ 34 ರಲ್ಲಿ ಇದೀಗ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವಾರ್ಡ್ ಮಾದರಿಯಾಗಲಿ ಎಂಬುದ ಜನರ ಆಶಯ.
‘ಲಕ್ಷ್ಮಣ ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತವಿದೆ. ಅವರು ಬಂದರೂ ನಮ್ಮ ಸ್ವಾಗತವಿದೆ’
ಜೋಶಿನೇ ನಮ್ಮ ನಾಯಕ. ಅವರಿಗೇ ಈ ಬಾರಿ ಲೋಕಸಭೆ ಟಿಕೇಟ್ ಸಿಗಬೇಕು: ಶಾಸಕ ಬೆಲ್ಲದ್