ಗುಜರಾತ್‌ನಲ್ಲಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್ ಹಾಕಿದ್ದ 8 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ವಾರ ಕೇಜ್ರಿವಾಲ್ ಮೋದಿ ಹಠಾವೋ, ದೇಶ್ ಬಚಾವೋ ಅಭಿಯಾನ ಶುರು ಮಾಡಿದ್ದರು. ಆ ಅಭಿಯಾನಕ್ಕೆ ಬೆಂಬಲ ಕೊಟ್ಟು, ಈ ಯುವಕರು ಈ ಕೆಲಸ ಮಾಡಿ, ಅರೆಸ್ಟ್ ಆಗಿದ್ದಾರೆ.
ಅಹಮದಾಬಾದ್‌ನಲ್ಲಿ ಮೋದಿ ಹಠಾವ್, ದೇಶ್ ಬಚಾವ್ ಎಂದು 8 ಜನರು ಪೋಸ್ಟ್ ಅಂಟಿಸಿದ್ದರು. ಅರೆಸ್ಟ್ ಆದವರೆಲ್ಲ ಎಎಪಿ ವರ್ಕರ್ಸ್ ಎಂದು ಹೇಳಲಾಗಿದೆ. ಈ ಬಗ್ಗೆ ಕಿಡಿ ಕಾರಿರುವ ಎಎಪಿ ನಾಯಕ, ಇಸುಧಾನ್ ಗಾಢ್ವಿ, ಅರೆಸ್ಟ್ ಆದವರೆಲ್ಲ ನಮ್ಮ ಪಾರ್ಟಿ ವರ್ಕರ್ಸ್ ಆಗಿದ್ದಾರೆ. ಈ ಕೇಸ್ ನೋಡಿದ್ರೆ ಗೊತ್ತಾಗತ್ತೆ, ಬಿಜೆಪಿಯವರು ನಮ್ಮಿಂದ ಭಯಪಟ್ಟು ಈ ಕೆಲಸ ಮಾಡಿಸಿದ್ದಾರೆ. ಮತ್ತು ಇದು ಸರ್ವಾಧಿಕಾರಿ ಧೋರಣೆಯಾಗಿದೆ. ನೀವು ಎಷ್ಟೇ ಪ್ರಯತ್ನ ಪಟ್ಟರೂ, ನಮ್ಮ ಕಾರ್ಯಕರ್ತರು ಹೋರಾಡುತ್ತೇವೆ ಎಂದು ಗಾಢ್ವಿ ಹೇಳಿದ್ದಾರೆ.
ಎಎಪಿ ಪಾರ್ಟಿಯವರು ಇಡೀ ದೇಶದಲ್ಲಿ 11 ಭಾಷೆಯಲ್ಲಿ ದೇಶ್ ಬಚಾವೋ, ಮೋದಿ ಹಠಾವೋ ಅಭಿಯಾನ ಆರಂಭಿಸಿದ್ದಾರೆ. ಹಿಂದಿ, ಇಂಗ್ಲಿಷ್, ಉರ್ದು, ಕನ್ನಡ, ತೆಲುಗು, ಮಲಯಾಳಂ, ಮರಾಠಿ, ಬೆಂಗಾಲಿ, ಪಂಜಾಬಿ, ಓರಿಯಾ, ಗುಜರಾತಿ ಭಾಷೆಯಲ್ಲಿ ಕ್ಯಾಂಪೇನ್ ಶುರು ಮಾಡಲಾಗಿದೆ. ಕಳೆದ ವಾರವೂ ಈ ಅಭಿಯಾನವನ್ನು ಮಾಡಿದ 49 ಜನರ ಮೇಲೆ ಎಫ್ಐಆರ್ ಹಾಕಲಾಗಿದ್ದು, 6 ಜನರನ್ನ ಅರೆಸ್ಟ್ ಮಾಡಲಾಗಿದೆ.
ಇನ್ನು ಈ ಪೋಸ್ಟರ್‌ಗಳನ್ನು ಯಾವ ಪ್ರಿಂಟಿಂಗ್ ಪ್ರೆಸ್‌ನಿಂದ ಪ್ರಿಂಟ್ ಮಾಡಿಸಲಾಯಿತೋ, ಆ ಪ್ರಿಂಟಿಂಗ್ ಪ್ರೆಸ್ ಓನರ್‌ಗಳನ್ನ ಸಹ ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ದೇಹಲಿ ಮುಖ್ಯಮಂತ್ರಿ, ಅರವಿಂದ್ ಕೇಜ್ರಿವಾಲ್. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿರಬೇಕಾದರೂ ಕೂಡ ಬ್ರಿಟೀಷರ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕೆ, ಅವರೂ ಕೂಡ ಯಾರನ್ನೂ ಅರೆಸ್ಟ್ ಮಾಡಿರಲಿಲ್ಲ. ಆದ್ರೆ ದೇಶದ ಪ್ರಧಾನಿ ವಿರುದ್ಧ ಪೊಸ್ಟರ್ ಅಂಟಿಸಿದ್ದಕ್ಕೆ, ಅರೆಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.