ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 9 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ .
ದೇಶದ 4320 ನಗರಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು, 28 ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ 4.2 ಕೋಟಿ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದರು . ಹೀಗೆ ವಿವಿಧ ವರ್ಗದಲ್ಲಿ ಆಯ್ಕೆಯಾದ ನಗರಗಳಿಗೆ ಶನಿವಾರ ವಿಜ್ಞಾನ ಭವನದಲ್ಲಿ ರಾಷ್ಟçಪತಿ ರಾಮನಾಥ್ ಕೋವಿಂದ್
ಹಾಗು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಪ್ರಶಸ್ತಿಯನ್ನು ವಿತರಿಸಿದರು .
ದೇಶದ ಬೃಹತ್ ಸ್ವಚ್ಚ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 8 ನೇಸ್ಥಾನ ಲಭಿಸಿದೆ . ಛತ್ತೀಸ್ ಗಢ ನಂ 1 ಸ್ಥಾನದಲ್ಲಿದ್ದೆ, ನಮ್ಮ ಅರಮನೆ ನಗರಿ ಮೈಸೂರು ನಂ 1 ಸ್ವಚ್ಚ ನಗರಿ ,ಹಾಗು ನಂ 1 ಸ್ವಚ್ಚ ಜಿಲ್ಲೆ ಎಂಬ ಹಿರಿಮೆ ಪಡೆದುಕೊಂಡಿದೆ ..
ಜೊತೆಗೆ ಬೆಂಗಳೂರು ,ಹುಬ್ಬಳ್ಳಿ -ಧಾರವಾಡ ,ಮುಧೋಳ ,ಹೊಸದುರ್ಗ ,ಕೆ ಆರ್ ನಗರ ,ಕುಮುಟಾ ,ಪಿರಿಯಾಪಟ್ಟಣಗಳಿಗೂ ವಿವಿಧ ಭಾಗಗಳಲ್ಲಿ
ನಂ-1 ಸ್ವಚ್ಛ ಪ್ರಶಸ್ತಿಗಳು ಲಭಿಸಿದ್ದು ದೇಶಕ್ಕೆ ಮಾದರಿಯಾಗಿ ಕರ್ನಾಟಕ ರಾಜ್ಯ ಹೊರಹೊಮ್ಮುತ್ತಿರುವುದು ಎಲ್ಲರು ಹೆಮ್ಮೆ ಪಡುವಂತಹ ವಿಷಯವಾಗಿದೆ .
ಕರ್ನಾಟಕ ರಾಜ್ಯಕ್ಕೆ 9 ಸ್ವಚ್ಚ ಪ್ರಶಸ್ತಿ
- Advertisement -
- Advertisement -