ಮಹಿಳೆಯರಿಗೂ ಬಟ್ಟೆಗೂ ಇರೋ ನಂಟು ತೋಬಾನೇ ಹಳೆಯದ್ದು.ತನ್ನ ಹತ್ರ ಎಷ್ಟೇ ಬಟ್ಟೆಗಳಿದ್ರೂ ಬಟ್ಟೆನೆ ಇಲ್ಲ ಅನ್ನೋ ಹೆಂಗಳಿಯರಿಗೆ ,ಕಾಲಕ್ಕೇ ತಕ್ಕಂತೆ ಫ್ಯಾಷನ್ ಗಳು ಬದಲಾಗುತ್ತೆ. ಬದಲಾಗುವ ಹವಮಾನಕ್ಕೆ ಒಗ್ಗುವಂತೆ ಮಹಿಳೆಯರ ಫ್ಯಾಷನ್ ಡ್ರೆಸ್ ಗಳು ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳ್ಳುತ್ತವೆ.ಅದರಲ್ಲೂ ಇದೀಗ ಮಳೆಗಾಲದಲ್ಲಿ ಮಹಿಳೆಯರ ಫ್ಯಾಷನ್ ಗಾಗಿ ಮಾರುಕಟ್ಟೆಗೆ ಸೈಲೀಶ್ ಟ್ರೆಂಡ್ ಒಂದು ಕಾಲಿಟ್ಟಿದೆ. ಆ ಡ್ರೆಸ್ ಯಾವುದು ?.
ಈ ಬಾರಿಯ ಮಾನ್ಸೂನ್ ಸೀಸನ್‌ನಲ್ಲಿ ಹುಡುಗಿಯರಿಗೆ, ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲಾಮರಸ್ ಲುಕ್ ಕೊಡೋ ಡಿಫರೆಂಟ್ ಡ್ರೆಸ್ ಒಂದು ಮಾರುಕಟ್ಟೆಗೆ ಬಂದಿದೆ,ಅದೇ ಸಿಕ್ವೀನ್ಸ್ ರೆಟ್ರೊ ಸ್ಪೆಕ್ಟ್ರಮ್ ಡ್ರೆಸ್‌ಗಳು. ಏನಿದು ಸ್ಪೆಕ್ಟ್ರಮ್ ಡ್ರೆಸ್?ಇದ್ರ ಮೇಕೋವರ್ ಹೇಗೆ?ಅಂತಾ ನೋಡೋದಾದ್ರೆ.
ಮಳೆಗಾಲಕ್ಕೆ ಹೊಂದುವ ಹಾಗೆ ಗ್ಲಾಮರಸ್ ಆಗಿ ಕಾಣಿಸುವ ಔಟ್‌ಫಿಟ್‌ಗಳು ಬರೋದು ತೀರಾ ಕಡಿಮೆ.ಒಂದು ವೇಳೆ ಬಂದ್ರು ಅದು ಹೈ ಫ್ಯಾಷನ್ ಅಥವಾ ಹೈ ಸ್ಟ್ರೀಟ್ ಫ್ಯಾಷನ್ ಅಥವಾ ಸೆಲೆಬ್ರೆಟಿ ಔಟ್‌ಫಿಟ್ ಕ್ಯಾಟಗರಿಗೆ ಸೇರಿಕೊಳ್ಳುತ್ತವೆ. ಹಾಗಾಗಿ ಅದರ ಬೆಲೆಯೂ ದುಬಾರಿಯಾಗಿರುತ್ತದೆ.
ಇನ್ನು ಮಾನ್ಸೂನ್‌ನಲ್ಲಿ ಸ್ಲಿವ್‌ಲೆಸ್ ಗಳ ಫ್ಯಾಷನ್ ಕಡಿಮೆ.ಹೀಗಾಗಿನೇ ಈ ಸೀಸನ್‌ನಲ್ಲಿ ಗ್ಲಾಮರಸ್ ಆಗಿ ಕಾಣೋಕೆ ಈ ವಿನ್ಯಾಸಗಳು ಬಾಡಿಕಾನ್ ಡ್ರೆಸ್‌ನೊಳಗೆ ಸೇರಿಕೊಳ್ಳತ್ತವೆ.ಸದ್ಯ ರೆಟ್ರೊ ಸ್ಪೆಕ್ಟ್ರಮ್ ಡ್ರೆಸ್‌ಗಳಿಗೆ ಹುಡುಗಿಯರ ಮನಸೂರೆಗೊಂಡಿವೆ. ಹಾಗಾಗಿ ಈ ಔಟ್ ಫಿಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಿಕ್ವೀನ್ಸ್ ಡ್ರೆಸ್ ಮೇಲೆ ಕಲರ್‌ಫುಲ್ ರೈನ್ಬೋ ಸ್ಟೈಲ್ ನಲ್ಲಿ ವಿನ್ಯಾಸಗೊಂಡಿರುವ ಈ ಔಟ್‌ಫಿಟ್,ಇದೀಗ ಕಾಲೇಜು ಹುಡುಗಿಯರ ಹಾಗೂ ಗ್ಲಾಮರಸ್ ಯುವತಿಯರ ಫ್ಯಾಷನ್ ಚಾಯ್ಸ್ ಗೆ ಸೇರಿಕೊಂಡಿವೆ. ಈ ಡ್ರೆಸ್ ನಲ್ಲಿ ಹೆಚ್ಚಾದ ಡಿಸೈನ್ ಇಲ್ದೇ ಇರೋ ಕಾರಣ ನೋಡಲು ತೀರಾ ಸಿಂಪಲ್ ಡಿಸೈನ್ ಎನಿಸುತ್ತೇ.ವಿಶೇಷ ಅಂದ್ರೆ ಇದು ಲೈಟ್‌ನಲ್ಲಿ ಜಗಮಗಿಸುತ್ತದೆ.
ಸಿಕ್ವೀನ್ಸ್ ಡಿಸೈನ್ ನಿಂದಾಗಿ ಈ ಡ್ರೆಸ್ ಪಾರ್ಟಿವೇರ್‌ನಂತೆಯೂ ಕಾಣಿಸುವುದು. ಇದರಿಂದಾಗಿ ಹುಡುಗಿಯರು ಇದೀಗ ಈ ಡ್ರೆಸ್‌ಗಳನ್ನು ಪಾರ್ಟಿವೇರ್‌ಗಳಾಗಿಯೂ ಧರಿಸುತ್ತಿದ್ದಾರೆ. ಇನ್ನು, ರೆಟ್ರೊ ಶೈಲಿಯಲ್ಲಿ ಔಟ್‌ಫಿಟ್ ಕಾಣಿಸುವುದರಿಂದ ಈ ಡ್ರೆಸ್‌ಗೆ ರೆಟ್ರೊ ಸ್ಪೆಕ್ಟ್ರಮ್ ಡ್ರೆಸ್ ಅಂತಾನೂ ಕರೀಬಹುದು.
ಅಂದಹಾಗೆ ಈ ಸ್ಪೆಕ್ಟ್ರಮ್ ಡ್ರೆಸ್ ನ ಆಯ್ಕೆ ಮತ್ತು ಮೇಕೋವರ್ ಹೇಗೆ ಅನ್ನೋದಾದ್ರೆ, ಈ ಡ್ರೆಸ್ ನಲ್ಲಿ ಆದಷ್ಟೂ ಬಾಡಿ ಟೈಪ್‌ಗೆ ಹೊಂದುವಂತಹ ಡಿಸೈನ್‌ನನ್ನ ಹುಡಕಬೇಕು .ಸದ್ಯ ಡಾರ್ಕ್ ಕಲರ್‌ನಲ್ಲಿ ಬ್ಲ್ಯಾಕ್ ಶೇಡ್‌ನ ಸ್ಪೆಕ್ಟ್ರಮ್ ಡ್ರೆಸ್‌ಗಳು ಟ್ರೆಂಡ್‌ನಲ್ಲಿದ್ದು ಅದನ್ನೇ ಚಾಯ್ಸ್ ಮಾಡ್ಕೋಳ್ಳೋದು ಉತ್ತಮ.ಹಾಗೇನೆ ಈ ಔಟ್‌ಫಿಟ್ ಮೇಲೆ ಕ್ರಾಪ್ ಜಾಕೆಟ್ ಜೊತೆ ಹೀಲ್ಸ್ ಫುಟ್‌ವೇರ್ ಧರಿಸಿದ್ರೆ ಪರ್ಫೆಕ್ಟ್ ಲುಕ್ ನೀಡೋದು ಖಂಡಿತ. ಇದರೊಂದಿಗೆ ಮಿನಿಮಲ್ ಆಕ್ಸೆಸರೀಸ್ ಕೂಡ ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತೆ.