Monday, September 9, 2024

Latest Posts

ಸದಾಕಾಲ ಏಕಾಂತವಾಗಿ ಇರಲು ಬಯಸುವ ರಾಶಿಯವರು ಇವರು

- Advertisement -

Horoscope: ನಾವು ಎರಡು ರೀತಿಯ ಜನರನ್ನು ನೋಡಿರುತ್ತೇವೆ. ಯಾವಾಗಲೂ ಗುಂಪಲ್ಲಿ ಇದ್ದು, ಸಖತ್ ಎಂಜಾಯ್ ಮಾಡುವವರು. ಇನ್ನು ಕೆಲವರು ಒಬ್ಬರೇ ಇದ್ದು, ಜೀವನದ ಸ್ವಾದ ತೆಗೆದುಕೊಳ್ಳುವವರು. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಈ ರೀತಿ ಒಬ್ಬರೇ ಇದ್ದು, ಜೀವಿಸಬೇಕು ಅಂತಾ ಅನ್ನಿಸುತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೃಷಭ: ವೃಷಭ ರಾಶಿಯವರು ಸದಾ ಏಕಾಂತದಲ್ಲಿ ಇರಲು ಬಯಸುತ್ತಾರೆ. ವೃಷಭ ರಾಶಿಯವರು ಹೆಚ್ಚು ಜನಜಂಗುಳಿಯಲ್ಲಿ ಇರಲು, ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಬೆರೆಯಲು ಹಿಂಜರಿಯುತ್ತಾರೆ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವ ರೀತಿ ಇರುತ್ತಾರೆ. ಅದರಲ್ಲಿ ಅವರಿಗೆ ಇಷ್ಟವಾಗದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಆ ಸ್ಥಳದಿಂದ ದೂರ ಸರಿದುಬಿಡುತ್ತಾರೆ.

ಕಟಕ: ಕಟಕ ರಾಶಿಯವರು ಸದಾ ಒಬ್ಬಂಟಿಯಾಗಿರಲು ಬಯಸುತ್ತಾರೆ. ಇವರಿಗೆ ಸ್ನೇಹಿತರು ಕೂಡ ಕಡಿಮೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು, ಪ್ರವಾಸಗಳಿಗೆ ಹೋಗಲು ಹಿಂಜರಿಯುತ್ತಾರೆ. ತುಂಬ ಇಷ್ಟಪಡುವ ವ್ಯಕ್ತಿಯ ಜೊತೆ ಅಪರೂಪಕ್ಕೆ ಸುತ್ತಾಟಕ್ಕೆ ಹೋಗುತ್ತಾರೆ. ಇನ್ನು ಇವರಿಗೆ ಏಕಾಂತವಾಗಿರುವುದೇ ಇಷ್ಟವಾದ ಕಾರಣ, ಹೆಚ್ಚು ಕತ್ತಲಕೋಣೆಯನ್ನು ಇಷ್ಟಪಡುತ್ತಾರೆ.

ಮಕರ: ಮಕರ ರಾಶಿಯವರು ಮಹಾತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ. ಇವರು ಎಲ್ಲ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದರಿಂದ, ಇವರು ಉತ್ತಮ ಸಂಗಾತಿಯಾಗಲು ಸಾಧ್ಯವಾಗೋದು ತುಂಬಾ ಕಡಿಮೆ. ಬೋರಿಂಗ್ ವ್ಯಕ್ತಿ ಎನ್ನಿಸಿಕೊಳ್ಳುವ ಕಾರಣ, ಸಂಗಾತಿಯ ಜೊತೆಗೆ ಸಂಬಂಧ ಅಷ್ಟಕ್ಕಷ್ಟೇ ಇರುತ್ತದೆ.

ಮೀನ: ಸಹನೆಯ ಸ್ವಭಾವ ಹೊಂದಿರುವ ಈ ರಾಶಿಯವರು, ಇವರಿಗೆ ಯಾರಾದರೂ ಬೈದರೂ ಅವರಿಗೆ ಎದುರುತ್ತರ ಕೂಡ ನೀಡದೇ, ಹಿಂದೆ ಸರಿಯುವ ಸ್ವಭಾವದವರು. ಹಾಗಂತ ಇವರಿಗೆ ಧೈರ್ಯವಿಲ್ಲ ಎಂದಲ್ಲ. ಬದಲಾಗಿ ಮೂರ್ಖರೊಂದಿಗೆ ವಾದ ಮಾಡಬಾರದು ಅನ್ನುವ ಬುದ್ಧಿವಂತಿಕೆ ಇವರದ್ದಾಗಿರುತ್ತದೆ. ಅಲ್ಲದೇ, ಏಕಾಂತದಲ್ಲಿರಲು ಈ ರಾಶಿಯವರು ತುಂಬಾ ಇಷ್ಟಪಡುತ್ತಾರೆ.

- Advertisement -

Latest Posts

Don't Miss