Thursday, October 17, 2024

Latest Posts

ಟಾಟಾ ಗ್ರೂಪ್ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ನೇಮಕ

- Advertisement -

Business News: ನಿನ್ನೆ ತಾನೇ ವಾಣಿಜ್ಯ ಉದ್ಯಮದ ದಿಗ್ಗಜ, ಸರಳ ಜೀವಿ, ಪದ್ಮವಿಭೂಷಣ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಬಳಿ ಟಾಟಾ ಗ್ರೂಪ್ ಉತ್ತರಾಧಿಯಾರಿ ಯಾರಾಗುತ್ತಾರೆ ಅನ್ನೋ ಗೊಂದಲ ಹಲವರಲ್ಲಿ ಇತ್ತು. ಇದೀಗ ರತನ್ ಟಾಟಾ ಸೋದರ ಸಂಬಂಧಿಯಾಗಿರುವ ನೋಯೆಲ್‌ ಟಾಟಾ, ಟಾಟಾ ಗ್ರೂಪ್‌ನ ಉತ್ತರಾಧಿಕಾರಿಯಾಗಿದ್ದಾರೆ.

67 ವರ್ಷದ ನೊಯೆಲ್ ಟಾಟಾ ಟಾಟಾ ಸ್ಟೀಲ್‌ಸ್‌ನ ಉಪಾಧ್ಯಕ್ಷರು. ಇದೀಗ ಟಾಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅಲ್ಲದೇ ಅವರು್ ಈಗಾಗಲೇ ಸರ್ ದೋರಾಬ್ಜಿ ಟಾಟಾ ಟ್ರಸ್ಟ್ ಮತ್ತು ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲಿ ರತನ್ ಟಾಟಾ ಅವರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಟಾಟಾ ಮೊನ್ನೆ ರಾತ್ರಿ 12 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಅವರು ನಿಧನರಾಗುವ ಮುನ್ನ ದಿನವೇ, ನನಗೆ ಆರೋಗ್ಯ ಸರಿ ಇಲ್ಲ, ನಾನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಪರಿಸ್ಥಿತಿ ಗಂಭೀರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ನಾನು ಆರೋಗ್ಯವಾಗಿದ್ದೇನೆ ಎಂದು ಖುದ್ದು ರತನ್ ಟಾಟಾ ಅವರೇ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಆದರೆ ದುರಾದೃಷ್ಟವಶಾತ್, ರತನ್ ಟಾಟಾ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

- Advertisement -

Latest Posts

Don't Miss