Thursday, October 17, 2024

Latest Posts

Health tips: ಕ್ಯಾನ್ಸರ್ ಯಾಕೆ ಹೆಚ್ಚಾಗ್ತಿದೆ? ಇದಕ್ಕೆ ಕಾರಣವೇನು..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡುತ್ತಿರುವಂತೆ, 100ರಲ್ಲಿ 4 ಜನ ಕ್ಯಾನ್ಸರ್‌ನಿಂದ ಮೃತಪಟುತ್ತಿದ್ದಾರೆ. ಲಂಗ್ ಕ್ಯಾನ್ಸರ್‌, ಲಿವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಹೀಗೆ ಹಲವು ರೀತಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಕ್ಯಾನ್ಸರ್ ಹೆಚ್ಚಾಗಲು ಕಾರಣವೇನು ಎಂದು ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋ

ವೈದ್ಯರು ಹೇಳುವ ಪ್ರಕಾರ, ಸತ್ತ ಜೀವಕೋಶಗಳಿಂದ ಸೃಷ್ಟಿಯಾಗುವ ರೋಗವೇ ಕ್ಯಾನ್ಸರ್. ನಮ್ಮ ದೇಹದಲ್ಲಿ ಜೀವಕೋಶಗಳು ಸಾವನ್ನಪ್ಪಲು ಕಾರಣವೇ ನಾವು ಸೇವಿಸುವ ಆಹಾರ. ನಾವು ಹೆಚ್ಚು ಅನಾರೋಗ್ಯಕರ ಆಹಾರ, ಕೆಮಿಕಲ್ ಯುಕ್ತವಾದ ಆಹಾರ ಸೇವನೆ ಮಾಡಿದಾಗಲೇ, ನಮ್ಮ ದೇಹದಲ್ಲಿ ಜೀವಕೋಶಗಳು ಸಾವನ್ನಪ್ಪುತ್ತದೆ. ಅದರಲ್ಲೂ ಫ್ರಿಜ್‌ನಲ್ಲಿಟ್ಟು, ಮತ್ತೆ ಮತ್ತೆ ಬಿಸಿ ಮಾಡಿ ಮಾಡಿ ತಿನ್ನುವ ಆಹಾರದಲ್ಲಿ, ತನ್ನಿಂದತಾನೇ ವಿಷಕಾರಿ ಅಂಶ ಹುಟ್ಟಿಕೊಳ್ಳುತ್ತದೆ.

ಪ್ಲಾಸ್ಟಿಕ್ ತಟ್ಟೆ, ಪ್ಲೇಟ್, ಲೋಟದಲ್ಲಿ ಬಿಸಿ ಬಿಸಿ ಪೇಯ, ಆಹಾರವನ್ನು ಪ್ರತಿದಿನ ಸೇವಿಸಿದರೆ, ಕ್ಯಾನ್ಸರ್ ಬರುವುದಂತೂ ಗ್ಯಾರಂಟಿ. ಅಲ್ಲದೇ ಅಗತ್ಯಕ್ಕಿಂತ ಹೆಚ್ಚು ಟೀ, ಕಾಫಿ ಸೇವನೆ, ಮಾಂಸಾಹಾರ ಸೇವನೆ, ಬೀದಿ ಬದಿ ತಿಂಡಿ ತಿನ್ನುವುದು, ಪ್ರತಿದಿನ ಹೊಟೇಲ್ ಊಟ ಸೇವನೆ ಮಾಡುವುದೆಲ್ಲ ಅನಾರೋಗ್ಯಕರ ಜೀವನ ಶೈಲಿಯಾಗಿದೆ. ಇಂಥ ಚಟಗಳಿಂದಲೇ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss