Saturday, October 19, 2024

Latest Posts

Spiritual: ಸಾಡೇ ಸಾಥಿ ಬಂದಾಗ, ಬರೀ ನಷ್ಟವೇ ಆಗುತ್ತದೆ ಅನ್ನೋದು ಎಷ್ಟು ಸತ್ಯ..?

- Advertisement -

Spiritual: ಪ್ರತೀ ಮನುಷ್ಯನ ಜೀವನದಲ್ಲಿ ಸಪ್ತಮ ಶನಿ ಅನ್ನೋದು ಬಂದೇ ಬರುತ್ತದೆ. ಮನುಷ್ಯನಷ್ಟೇ ಏಕೆ..? ದೇವತೆಗಳು, ದೇವರುಗಳು ಕೂಡ ಶನಿಕಾಟಕ್ಕೆ ಒಳಗಾಗಿದ್ದಾರೆ. ಆದರೆ ಕೆಲವರು ಹೇಳುವ ಪ್ರಕಾರ, ಸಪ್ತಮಶನಿ ಅಂದರೆ ಸಾಡೇಸಾಥಿ ಕಾಟ ಶುರುವಾದರೆ, ಮನುಷ್ಯನ ಜೀವನದಲ್ಲಿ ಬರೀ ಕಷ್ಟವೇ ಬರುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ ಇದು ಎಷ್ಟು ಸತ್ಯ ಅಂತ ತಿಳಿಯೋಣ ಬನ್ನಿ..

ಸಾಡೇಸಾಥಿಯನ್ನು ಸಪ್ತಮ ಶನಿ, ಏಳುವರೇ ಶನಿಕಾಟವೆಂದು ಹೇಳಲಾಗುತ್ತದೆ. ಅಂದರೆ ಏಳುವರೆ ವರ್ಷ ಶನಿ ಕಾಟವಿರುತ್ತದೆ. ಎರಡುವರೆ ವರ್ಷ ಒಂದು ರೀತಿಯ ಜೀವನ, ಮತ್ತೆ ಎರಡುವರೆ ವರ್ಷ ಮತ್ತೊಂದು ರೀತಿಯ ಜೀವನ, ಕೊನೆಯ ಎರಡೂವರೆ ವರ್ಷ ಇನ್ನೊಂದು ರೀತಿಯ ಜೀವನ. ಹೀಗೆ ಪ್ರತೀ ಎರಡೂವರೆ ವರ್ಷಗಳ ಕಾಲ ಶನಿ ತನ್ನ ಪ್ರಭಾವ ಬೀರಿ ಎದ್ದು ಹೋಗುತ್ತಾನೆ.

ಮೊದಲ ಎರಡೂವರೆ ವರ್ಷ ದೇಹದ ಮೇಲ್ಭಾಗದಲ್ಲಿ ತೊಂದರೆ, ನಂತರದ ಎರಡೂವರೆ ವರ್ಷ ದೇಹದ ಮಧ್ಯಭಾಗದಲ್ಲಿ ತೊಂದರೆ, ಕಡೆಯ ಎರಡೂವರೆ ವರ್ಷ ಕಾಲಿನ ಭಾಗದಲ್ಲಿ ತೊಂದರೆ. ಅಂದರೆ, ಮೊದಲ ಭಾಗದಲ್ಲಿ ಮಾನಸಿಕ ಹಿಂಸೆ, ಕೊಂಕು ಮಾತು ಕೇಳಿಸಿಕೊಳ್ಳುವುದು, ಜಗಳವಾಡುವುದು, ಒಟ್ಟಾರೆ ಬದುಕೇ ಬೇಡ ಎನ್ನಿಸಲು ಶುರುವಾಗುಷ್ಟು ನಶ್ವರವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ದೇವರ ಧ್ಯಾನ ಹೆಚ್ಚಾಗಿ ಮಾಡುತ್ತ, ತಾಳ್ಮೆಯಿಂದ ಇರುವುದು, ಕಡಿಮೆ ಮಾತನಾಡುವುದು ಉತ್ತಮ.

ಎರಡನೇಯ ಭಾಗದಲ್ಲಿ ಮಾನಸಿಕ ನೆಮ್ಮದಿ ಹೆಚ್ಚಾಗಿರುತ್ತದೆ. ಖುಷಿಯೂ ಹೆಚ್ಚು, ಭಾರೀ ನೆಮ್ಮದಿಯ ಜೀವನ. ಈ ಜೀವನದಲ್ಲಿ ಮುಳುಗಿ ಹೋಗಿ, ರುಚಿ ರುಚಿಯಾದ ತಿಂಡಿ ತಿಂದು, ಹೊಟ್ಟೆಯ, ಹೃದಯದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಖುಷಿ ಖುಷಿಯ ಜೀವನ ಎಂಜಾಯ್ ಮಾಡುವಾಗ, ಹೃದಯ ಮಮತ್ತು ಹೊಟ್ಟೆಯ ಆರೋಗ್ಯದ ಬಗ್ಗೆ ಗಮನವಿಡಬೇಕು. ಏಕೆಂದರೆ, ಈ ಸಮಯದಲ್ಲಿ ಜನರಿಗೆ ಹೆಚ್ಚು ನಷ್ಟವಾಗುತ್ತದೆ. ಆರೋಗ್ಯಹಾನಿಯಾಗಿ, ಆಸ್ಪತ್ರೆ ಸೇರುವ ಸಂಭವ ಹೆಚ್ಚು.

ಮೂರನೇಯ ಭಾಗದಲ್ಲಿ ಕಾಲಿನ ಭಾಗದಲ್ಲಿ ತೊಂದರೆ. ಏಕೆಂದರೆ, ಈ ಸಮಯದಲ್ಲಿ ನಿಮಗೆ ದೇಶ ವಿದೇಶ ಸುತ್ತುವ ಅವಕಾಶ ಸಿಗುತ್ತದೆ. ಪ್ರವಾಸ ಹೋಗುವ ಅವಕಾಶ ಸಿಗುತ್ತದೆ. ಇಂಥ ಸಮಯದಲ್ಲಿ ಮೈಮರೆತು ದೇವರ ಧ್ಯಾನವನ್ನು ನಿಲ್ಲಿಸದೇ, ಶನಿ ದೇವನನ್ನು, ಹನುಮನನ್ನು ಆರಾಧಿಸಲೇಬೇಕು. ಏಕೆಂದರೆ, ಈ ಸಮಯದಲ್ಲಿ ಅಪಘಾತ ಸಂಭವಿಸುವುದು, ಕಾಲಿಗೆ ನೋವಾಗುವುದೆಲ್ಲ ಆಗುತ್ತದೆ.  ಕೊನೆಗೆ ಶನಿ ನಮ್ಮ ಜೀವನವನ್ನು ಬಿಟ್ಟು ಹೋಗುವಾಗ, ನಮಗೆ ಅದೃಷ್ಟವನ್ನೇ ತಂದುಕೊಟ್ಟು ಹೋಗುತ್ತಾನೆ ಎಂದು ಹೇಳಲಾಗಿದೆ.

ಇನ್ನು ಸಾಡೇಸಾಥಿ ನಡೆಯುವಾಗ ನಾವು ಧೈರ್ಯದಿಂದ ಇರಬೇಕು. ಹೆಚ್ಚು ದೇವರ ಧ್ಯಾನ ಮಾಡಬೇಕು ಎನ್ನಲಾಗಿದೆ. ಏಕೆಂದರೆ, ಹಲವರ ಜೀವನದಲ್ಲಿ ಸಾಡೇಸಾಥಿ ಬಂದಾಗ, ಅವರು ಅರ್ಧದಲ್ಲೇ ಜೀವನ ಮುಗಿಸಿ ಹೋದ ಎಷ್ಟೋ ಉದಾಹರಣೆಗಳಿದೆ. ಇಂಥವರು ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ, ಸಾಡೇಸಾಥಿ ಹೊಂದಿರುತ್ತಾರೆ.

- Advertisement -

Latest Posts

Don't Miss