Spiritual: ಕೆಲವು ಹಿಂದೂಗಳು ಈಗಿನ ಕಾಲದಲ್ಲೂ ಕೂಡ, ಬೆಳಿಗ್ಗೆ ಪೂಜೆಯಾಗುವ ಹೊತ್ತಿಗೆ, ಘಂಟೆ, ಜಾಗಟೆ, ಶಂಖ ಊದುತ್ತಾರೆ. ಮತ್ತು ಸಂಜೆ ದೀಪ ಹಚ್ಚಿದ ಬಳಿಕ, ಶಂಖ ಊದಲಾಗುತ್ತದೆ. ಹಾಗಾದ್ರೆ ಶಂಖ ಊದುವುದರ ಹಿಂದಿರುವ ರಹಸ್ಯವೇನು ಅಂತಾ ತಿಳಿಯೋಣ ಬನ್ನಿ..
ಶಂಖ ಊದುವುದರಿಂದ ಆ ಶಬ್ಧ ಎಲ್ಲಿಯವರೆಗೂ ಕೇಳುತ್ತದೆಯೋ, ಅಲ್ಲಿಯವರೆಗೆ ಇರುವ ಕ್ರಿಮಿಗಳು ನಿಷ್ಕ್ರೀಯಗೊಳ್ಳುತ್ತದೆ ಅಥವಾ ಸತ್ತು ಹೋಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಗಾಳಿಯಲ್ಲಿರುವ, ನಮ್ಮ ಕಣ್ಣಿಗೆ ಕಾಣದ ಎಷ್ಟೋ ಕೀಟಾಣುಗಳ ಸರ್ವನಾಶ ಮಾಡುವುದರಲ್ಲಿ ಶಂಖದ ಶಬ್ಧ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಇನ್ನು ವಯಸ್ಸಾದರೂ ತೊದಲು ಮಾತನಾಡುವವರು, ತಡೆದು ತಡೆದು ಮಾತನಾಡುವವರಿಗೆ ಶಂಖ ಊದಲು ಹೇಳಲಾಗುತ್ತದೆ. ಏಕೆಂದರೆ, ಶಂಖ ಊದುವುದರಿಂದ, ಮಾತಿನ ಸಮಸ್ಯೆ ದೂರವಾಗುತ್ತದೆ. ಮಾತು ಸ್ಪಷ್ಟವಾಗುತ್ತದೆ. ಏಕೆಂದರೆ, ಇದರಿಂದ ದೇಹ ಶುದ್ಧವಾಗಿ, ಅವರ ಮಾತು ಸ್ಪಷ್ಟವಾಗುತ್ತದೆ.
ಉಸಿರಾಡಲು ತೊಂದರೆಯಾಗುವುದು, ಎದೆ ನೋವಾಗುವುದು, ಹೃದಯ ಸಮಸ್ಯೆ ಇರುವವರು ಶಂಖ ಊದಿದರೆ, ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಏಕೆಂದರೆ, ಶಂಖ ಊದುವುದರಿಂದ ಶ್ವಾಸಕೋಶದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇನ್ನು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಕೆಲವೊಂದು ಟ್ರೀಟ್‌ಮೆಂಟ್ ಕೊಡಲಾಗುತ್ತದೆ. ಅದರಲ್ಲಿ ಒಂದು ವಸ್ತುವನ್ನು ಕೊಟ್ಟು, ಅದನ್ನು ಊದಲು ಹೇಳುತ್ತಾರೆ. ಏಕೆಂದರೆ, ಶಂಖ ಊದಿದಾಗ, ನಿಮ್ಮ ದೇಹದಲ್ಲಿ ಆಗುವ ಆರೋಗ್ಯಕರ ಬದಲಾವಣೆ, ಆ ವಸ್ತು ಊದಿದಾಗ ನಿಮಗಾಗುತ್ತದೆ. ಹಾಗಾಗಿ ಹೃದಯ ಸಮಸ್ಯೆ ಬರುವ ಮುನ್ನ ಶಂಖ ಊದುವುದನ್ನು ಕಲಿತರೆ, ಶ್ವಾಸಕೋಶ ಸಮಸ್ಯೆ, ಹೃದಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಅಷ್ಟೇ ಅಲ್ಲದೇ, ಬಿಪಿ ಕಂಟ್ರೋಲ್ ಮಾಡುತ್ತದೆ. ಮಾನಸಿಕ ನೆಮ್ಮದಿ ಕೊಡುತ್ತದೆ. ನಿಮ್ಮ ಮನಸ್ಸಿಗೆ ಕಿರಿಕಿರಿಯಾಗಿದ್ದರೆ, ದೇವರ ಧ್ಯಾನ ಮಾಡಿ, ಬಳಿಕ ಶಂಖ ಊದಿದರೆ, ನಿಮ್ಮ ಮನಸ್ಸಿಗೆ ಹಿತವೆನ್ನಿಸುತ್ತದೆ. ಉಸಿರಾಟದ ತೊಂದರೆ, ಶುಗರ್ ಕಂಟ್ರೋಲ್ ಮಾಡುವಲ್ಲಿಯೂ ಶಂಖ ಪ್ರಮುಖ ಪಾತ್ರ ವಹಿಸುತ್ತದೆ.