Bigg Boss News: ಬಿಗ್‌ಬಾಸ್ ಸೀಸನ್ 11 ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ.
ಉಗ್ರಂ ಮಂಜು ಬಗ್ಗೆ ಮಾತನಾಡಿರುವ ಜಗದೀಶ್, ಅವರು ಸಿನಿಮಾದಲ್ಲಿ ವಿಲನ್ ಆದ್ರೂ ನನ್ನ ಪಾಲಿಗೆ ಗುರು. ಅವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಆದರೂ ನಾನು ಅವರನ್ನು ಗುರು ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ಇನ್ನು ಚೈತ್ರಾ ಕುಂದಾಪುರ ಬಗ್ಗೆ ಮಾತನಾಡಿದ ಜಗದೀಶ್, ಅವರ ಮೇಲೆ ಚೀಟಿಂಗ್ ಕೇಸ್ ಇದೆ. ಅವರು ಚೀಟರ್ ಎನ್ನಿಸಿಕೊಂಡವರು. ಅವರ ಬಗ್ಗೆ ನಾನೇನು ಮಾತನಾಡಲಿ ಎಂದು ಹೇಳಿದ್ದಾರೆ. ದ್ವೇಷ ಸಾಧಿಸಲು ಬರುತ್ತಾರೆ. ಹಿಂದುತ್ವವಾದಿ ಅನ್ನುವ ಟ್ರಂಪ್‌ಕಾರ್ಡ್ ಪ್ಲೇ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಹಂಸ ಬಗ್ಗೆ ಮಾತನಾಡಿರುವ ಜಗದೀಶ್ ಆಕೆ ನನಗೆ ಗುರುವಿದ್ದಂತೆ. ಆಕೆಗೆ ಸದಾ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ. ಇನ್ನು ಧನರಾಜ್ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಆತ ಒಳ್ಳೆಯ ವ್ಯಕ್ತಿ ಎಂದು ಜಗದೀಶ್ ಹೇಳಿದ್ದಾರೆ.
ಇನ್ನು ಬಿಗ್‌ಬಾಸ್ ಮನೆಯಿಂದ ಬರುವಾಗ ಲಾಯರ್ ಜಗದೀಶ್, ರಂಜೀತ್ ಅವರನ್ನು ಕರೆತಂದಿದ್ದು, ಈ ಬಗ್ಗೆ ಮಾತನಾಡಿದ್ದಾರೆ. ಅವರು ಅಪ್‌ಕಮಿಂಗ್ ಆ್ಯಕ್ಟರ್ ಒಳ್ಳೆಯ ಹುಡುಗ. ಬಿಗ್‌ಬಾಸ್ ಮನೆಯಲ್ಲಿ ಸಣ್ಣ ಪುಟ್ಟ ತಪ್ಪಾಗಿದೆ ಅದಕ್ಕಾಗಿ ನಾವು ಕ್ಷಮೆ ಕೇಳಿಕೊಂಡು, ತಪ್ಪೊಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಇನ್ನು ಐಶ್ವರ್ಯಾ ಬಗ್ಗೆ ಮಾತನಾಡಿದ್ದು, ಆಕೆ ಸ್ವೀಟ್ ಸೋಲ್, ಆಕೆಯನ್ನು ನೋಡಿದ್ರೆ ನನಗೆ ನನ್ನ ಮಗಳು ನೆನಪಾಗುತ್ತಾಳೆ ಎಂದರು. ಪೂರ್ತಿ ಸಂದರ್ಶನ ನೋಡಲು ಈ ವೀಡಿಯೋ ನೋಡಿ.




