Health Tips: ಕೆಲವು ಬಾರಿ ಮೂಗಿನಲ್ಲಿ ಕೊಂಚ ಕೊಂಚ ರಕ್ತ ಬರುತ್ತದೆ. ಕೆಲವರಿಗೆ ಸಡನ್ ಆಗಿ, ಮೂಗಿನಿಂದ ಬಳ ಬಳನೇ ರಕ್ತ ಸುರಿಯುತ್ತದೆ. ಮೊದ ಮೊದಲು ಈ ಬಗ್ಗೆ ಅರಿವಿಲ್ಲದಿದ್ದವರು, ದೊಡ್ಡ ರೋಗವೇ ಬಂದಿದೆ ಎಂದು ಹೆದರುತ್ತಾರೆ. ಆದರೆ ಇದು ಹೆದರುವಂಥ ಸಮಸ್ಯೆ ಅಲ್ಲ. ಯಾವಾಗಲಾದರೂ ಮೂಗಿನಿಂದ ರಕ್ತ ಬಂದರೆ, ಅದಕ್ಕೆ ಬೇರೆಯದ್ದೇ ಕಾರಣವಿದೆ. ಈ ಬಗ್ಗೆ ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರೇ ವಿವರಿಸಿದ್ದಾರೆ ನೋಡಿ.
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಮೂಗಿನಿಂದ ರಕ್ತ ಬರುತ್ತದೆ. ನಿಮ್ಮ ಮೂಗಿನಿಂದಲೂ ರಕ್ತ ಬಂದರೆ, ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಬೇಕು ಎನ್ನುವ ಸೂಚನೆ ಸಿಕ್ಕಂತೆ. ಆಗ ನೀವು ತಂಪಾದ ಆಹಾರವಾದ ಎಳನೀರು, ಮಜ್ಜಿಗೆ, ಜ್ಯೂಸ್, ನೀರು, ತಂಪು ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳಿನ ಸೇವನೆ ಮಾಡಬೇಕು.
ಇನ್ನು ಬರೀ ಮೂಗಿನಲ್ಲಿ ಅಷ್ಟೇ ಅಲ್ಲದೇ, ಕಫದಲ್ಲಿ, ಮಲವಿಸರ್ಜನೆ ಮಾಡುವಾಗ ಅಲ್ಲಿ ರಕ್ತ ಹೋಗುತ್ತಿದೆ ಎಂದರೆ, ಆಗ ಕೂಡ ದೇಹದಲ್ಲಿ ಉಷ್ಣತೆ ಹೆಚ್ಚಾಗಿದೆ ಎಂದರ್ಥ. ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದೆ ಎಂದಲ್ಲಿ ಅದು ಕೂಡ ಉಷ್ಣತೆಯ ಅನುಭವವಾಗಿದೆ.
ಇನ್ನು ಬೇಸಿಗೆಗಾಲದಲ್ಲಿ ನಮ್ಮ ದೇಹದಲ್ಲಿ ಹೆಚ್ಚು ಉಷ್ಣ ಉತ್ಪತ್ತಿಯಾಗುತ್ತದೆ. ಯಾಕೆಂದ್ರೆ, ಆ ವೇಳೆ ಬಿಸಿಲು ಹೆಚ್ಚಾಗಿರುತ್ತದೆ. ಆ ವೇಳೆ ನಾವು ನಮ್ಮ ದೇಹವನ್ನು ತಂಪಾಗಿಡಬೇಕಾಗುತ್ತದೆ. ದೇಹದಲ್ಲಿ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮವಾಗಿರಬೇಕಾಗುತ್ತದೆ. ಆದರೆ ಆ ವೇಳೆ ನಾವು ತಂಪಾದ ಆಹಾರ ಸೇವಿಸದೇ ಇದ್ದಲ್ಲಿ, ಈ ರೀತಿ ರಕ್ತಸ್ರಾವವಾಗಿ, ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇಂಥ ಸಮಯದಲ್ಲಿ ತಂಪು ಆಹಾರ ಸೇವನೆ ಮಾಡುವುದರ ಜೊತೆಗೆ, ಮಸಾಲೆಯುಕ್ತ ಪದಾರ್ಥ, ಮಾಂಸಾಹಾರ ಸೇವನೆ, ಗಟ್ಟಿ ಆಹಾರಗಳು, ಜಂಕ್ ಫುಡ್, ಬೇಕರಿ ತಿಂಡಿಗಳನ್ನು ನಾವು ಸೇವಿಸಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.