Spiritual: ನೆಮ್ಮದಿ ಅನ್ನೋ ಪ್ರತೀ ಮನುಷ್ಯನಿಗೂ ಬೇಕಾಗುತ್ತದೆ. ರಾಶಿ ರಾಶಿ ಹಣವಿದ್ದು, ಮನೆಯಲ್ಲಿ ಸುಂದರ ಪತ್ನಿ, ಗಂಡು ಮಕ್ಕಳು, ಅಪ್ಪ-ಅಮ್ಮ, ಅಣ್ಣ- ತಂಗಿ, ಎಲ್ಲರೂ ಇದ್ದು, ಆರೋಗ್ಯವೂ ಚೆನ್ನಾಗಿದ್ದರೂ, ಕೆಲವರಿಗೆ ನೆಮ್ಮದಿ ಅನ್ನೋದು ಇರೋದಿಲ್ಲ. ಹಾಗಾದರೆ ನಿಮಗೆ ನೆಮ್ಮದಿ ಬೇಕಂದ್ರೆ ಏನು ಮಾಡಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ ನೋಡಿ.
ಚಾಣಕ್ಯರ ಪ್ರಕಾರ ನಮಗೆ ನೆಮ್ಮದಿ ಬೇಕು ಎಂದರೆ ನಾವು ಕೆಲವು ಸ್ಥಳಗಳಲ್ಲಿ, ಕೆಲವು ಸಮದಲ್ಲಿ ಮಾತನಾಡದೇ, ತಾಳ್ಮೆಯಿಂದ ಮೌನವಾಗಿ ಇರಬೇಕು. ಜಗಳವಾಗುತ್ತಿರುವ ಸಮಯದಲ್ಲಿ ಎದುರಿಗಿರುವ ವ್ಯಕ್ತಿ ನಿಮಗೆ ಬೈಯ್ಯುತ್ತಿದ್ದರೆ, ಅಥವಾ ನಿಮ್ಮ ಎದುರಿಗೆ ಬೇರೆ ಯಾರದ್ದೋ ಜಗಳ ನಡೆಯುತ್ತಿದ್ದರೆ ನೀವು ಮೌನ ವಹಿಸಬೇಕು. ಯಾರೋ ಬೈದರೆಂದು ನಿಮಗೆ ಅವಮಾನವಾಗುವುದಿಲ್ಲ. ನಿಮ್ಮ ಬೆಲೆ ಕಡಿಮೆಯಾಗುವುದಿಲ್ಲ. ಬದಲಾಗಿ ನಿಮ್ಮನ್ನು ಬೈದ ವ್ಯಕ್ತಿ ಮೇಲಿನ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ನೀವು ಜಗಳವಾಗುವ ಸಮಯದಲ್ಲಿ ಮೌನವಾಗಿರಬೇಕು.
ಭಾವನೆಗಳಿಗೆ ಬೆಲೆ ಸಿಗದ ಸ್ಥಳ: ನಿಮ್ಮ ಭಾವನೆಗಳಿಗೆ ಬೆಲೆ ಸಿಗುವುದಿಲ್ಲ. ನೀವೊಬ್ಬರು ಲಾಭಕ್ಕೆ ಇರುವ ವ್ಯಕ್ತಿ ಅಂತಷ್ಟೇ ನಿಮ್ಮನ್ನು ಪರಿಗಣಿಸುವ ಸ್ಥಳದಲ್ಲಿ ನೀವಿದ್ದರೆ, ಅಂಥ ಜಾಗದಲ್ಲಿ ಮೌನವಾಗಿರಬೇಕು. ಏಕೆಂದರೆ, ನಿಮ್ಮ ನೋವು, ದುಃಖ ಯಾವುದಕ್ಕೂ ಅಲ್ಲಿ ಬೆಲೆ ಇರುವುದಿಲ್ಲ. ಮನೆಗೆಲಸ ಮಾಡುವುದಕ್ಕೆ ಅಥವಾ ನೀವು ದುಡಿದ ದುಡ್ಡು ಕೊಡುವುದಕ್ಕಷ್ಟೇ ನೀವು ಸೀಮಿತರಾಗಿರುತ್ತೀರಿ. ಏಕೆಂದರಲ್ಲಿ, ನಿಮ್ಮನ್ನು ಪ್ರೀತಿಸುವವರ್ಯಾರು ಅಲ್ಲಿ ಇರುವುದಿಲ್ಲ. ಆದರೆ, ನಿಮ್ಮನ್ನು ಬಿಟ್ಟು ಅವರು ಇರಲು ಇಚ್ಛಿಸುವುದಿಲ್ಲ. ಸಾಧ್ಯವಾದರೆ, ಅಂಥ ಜಾಗ ಬಿಡಿ. ಇಲ್ಲವಾದಲ್ಲಿ, ಮೌನವಾಗಿ ಇದ್ದು ಬಿಡಿ.
ನಿಮಗೆ ಸಂಬಂಧ ಪಡದ ವಿಚಾರದ ಬಗ್ಗೆ ಯಾರಾದರೂ ಮಾತನಾಡುತ್ತಿದ್ದರೆ, ಅಂಥ ಜಾಗದಲ್ಲಿ ನೀವು ಮೌನವಾಗಿರುವುದೇ ಉತ್ತಮ. ಇಲ್ಲವಾದಲ್ಲಿ, ಇಲ್ಲದ ಸಮಸ್ಯೆಯನ್ನು ನೀವು ನಿಮ್ಮ ಮೇಲೆ ಎಳೆದುಕೊಳ್ಳಬೇಕಾಗುತ್ತದೆ.
ನಿಮ್ಮನ್ನು ಯಾರಾದರೂ ಹಂಗಿಸುತ್ತಿದ್ದರೆ, ಟೀಕೆ ಮಾಡುತ್ತಿದ್ದರೆ ಅಂಥ ಜಾಗದಲ್ಲಿ ತಾಳ್ಮೆಯಿಂದ ಇರಿ. ಹಂಗಿಸುವವರೊಂದಿಗೆ ಜಗಳ ಮಾಡುವುದೆಂದರೆ, ಹೇಸಿಗೆಯ ಮೇಲೆ ಕಲ್ಲು ಹಾಕಿದಂತೆ. ಸುಮ್ಮನೆ ಹೇಸಿಗೆಯನ್ನು ಮುಖಕ್ಕೆ ತಾಕಿಸಿಕೊಳ್ಳುವ ಬದಲು, ತಾಳ್ಮೆಯಿಂದ ಇದ್ದು, ಹೇಸಿಗೆಯಿಂದ ದೂರವಿದ್ದುಬಿಡಿ.