Thursday, December 26, 2024

Latest Posts

ಹೇಳಿಕೊಂಡ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಇಲ್ಲಿದೆ ನೋಡಿ ಸತ್ಯಕಥೆ

- Advertisement -

Spiritual: ಅಕ್ಷತ್ ಗುಪ್ತಾ.ಸನಾತನದ ಬಗ್ಗೆ ಅಧ್ಯಯನ ಮಾಡಿ, ಪುಸ್ತಕವನ್ನೂ ಬರೆದಿರುವ ಲೇಖಕ. ಜ್ಯೋತಿಷ್ಯದಲ್ಲೂ ಉನ್ನತಿ ಪಡೆದವರು. ನಾಗಾಸಾಧುಗಳೊಂದಿಗೆ ಇದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು, ಪುಸ್ತಕವನ್ನೂ ಬರೆದಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಬಗ್ಗೆ ನಿಜ ಜೀವನದ ಘಟನೆಯೊಂದನ್ನು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಹಿಂದೂ ಸಮುದಾಯದವರಲ್ಲದ ಓರ್ವ ವ್ಯಕ್ತಿ ಸಂತಾನ ಭಾಗ್ಯಕ್ಕಾಗಿ ಕಷ್ಟಪಡುತ್ತಿದ್ದರು. ಮದುವೆಯಾಗಿ ಹಲವು ವರ್ಷಗಳಾಗಿದ್ದರು ಕೂಡ, ಅವರಿಗೆ ಮಕ್ಕಳಾಗಿರಲಿಲ್ಲ. ಅವರ ಸಮುದಾಯದ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿ, ಅಲ್ಲಿ ದೇವರಲ್ಲಿ ಬೇಡಿಕೊಂಡರು, ಬೇಕಾದ ಚಿಕಿತ್ಸೆ ಪಡೆದರು. ಆದರೂ ಕೂಡ ಅವರಿಗೆ ಮಕ್ಕಳಾಗಿರಲಿಲ್ಲ.

ಈ ವಿಷಯ ತಿಳಿದಿದ್ದ, ಅವರ ಪಕ್ಕದ ಮನೆಯ ಹಿಂದೂ ವ್ಯಕ್ತಿ, ನನಗೆ ಓರ್ವ ದೇವಿ ದೇವಸ್ಥಾನದ ಬಗ್ಗೆ ಗೊತ್ತಿದೆ. ನಾನು ನಿಮ್ಮನ್ನು ಅಲ್ಲಿ ಕರೆದುಕೊಂಡು ಹೋಗುತ್ತೇನೆ. ನೀವು ಆ ದೇವಿಯಲ್ಲಿ ಹರಕೆ ಹೊತ್ತರೆ, ನಿಮಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾನೆ. ಈ ವ್ಯಕ್ತಿ ಸರಿ ಎಂದು ಹಿಂದೂ ವ್ಯಕ್ತಿಯೊಂದಿಗೆ ದೇವಸ್ಥಾನಕ್ಕೆ ಹೋಗುತ್ತಾನೆ.

ಪತಿ-ಪತ್ನಿ ಸೇರಿ ದೇವಿಯ ದರ್ಶನ ಮಾಡಿ, ಪೂಜೆ ಮಾಡಿ, ತಮಗೆ ಪುತ್ರ ಸಂತಾನವಾದರೆ, ಒಂದು ಜೊತೆ ಕುರಿ ಅಂದರೆ 2 ಕುರಿ ಬಲಿ ಕೊಡುತ್ತೇನೆ ಎಂದು ಬೇಡಿಕೊಳ್ಳುತ್ತಾರೆ. ಈ ಹರಕೆ ಹೊತ್ತು ಕೆಲವೇ ತಿಂಗಳಲ್ಲಿ ಆ ವ್ಯಕ್ತಿಯ ಪತ್ನಿ ಗರ್ಭಿಣಿಯಾಗುತ್ತಾಳೆ, ಪುತ್ರನಿಗೆ ಜನ್ಮ ನೀಡುತ್ತಾಳೆ. ಇದಾದ ಬಳಿಕ ಪಕ್ಕದ ಮನೆಯ ಹಿಂದೂ ವ್ಯಕ್ತಿ ಬಂದು, ನೀವು ದೇವಿಗೆ ಜೋಡಿ ಕುರಿ ಹರಕೆ ಕೊಡುತ್ತೇನೆ ಎಂದಿದ್ದೀರಿ. ಬನ್ನಿ ಅದನ್ನು ತೀರಿಸಿ ಬರೋಣ ಎನ್ನುತ್ತಾರೆ.

ಇದಕ್ಕೆ ಉತ್ತರಿಸಿದ ವ್ಯಕ್ತಿ, ಇಲ್ಲಾ ಇಲ್ಲಾ ನಾನು ಒಂದು ಜೋಡಿ ಕುರಿ ಎಂದು ಹೇಳಿರಲಿಲ್ಲ. ಒಂದು ಕುರಿ ಎಂದಿದ್ದೆ ಎಂದು ಮಾತು ತಿರುಗಿಸುತ್ತಾನೆ. ಬಳಿಕ ಒಂದೇ ಕುರಿ ಹರಕೆ ಕೊಡುತ್ತಾನೆ. ಹೀಗೆ ವರ್ಷ ಕಳೆದು ಎಲ್ಲ ಮಕ್ಕಳಂತೆ ಈ ವ್ಯಕ್ತಿಯ ಮಗು ಮಾತನಾಡುವ, ಮಾತಿಗೆ ಪ್ರತಿಕ್ರಿಯಿಸುವ ವಯಸ್ಸಿಗೆ ಬರುತ್ತದೆ. ಆದರೆ ಆ ಮಗು ಮಾತನಾಡುವುದಿಲ್ಲ, ಕರೆದರೂ ಕೇಳುತ್ತಿರಲಿಲ್ಲ. ಪ್ರತಿಕ್ರಿಯಿಸುತ್ತಿರಲಿಲ್ಲ.

ವೈದ್ಯರ ಬಳಿ ಹೋಗಿ ಪರೀಕ್ಷಿಸಿದಾಗ, ಆ ಮಗುವಿಗೆ ಮಾತು ಬರುವುದಿಲ್ಲ. ಕಿವಿಯೂ ಕೇಳುವುದಿಲ್ಲವೆಂದು ಗೊತ್ತಾಗುತ್ತದೆ. ಇದಕ್ಕಾಗಿಯೂ ಆ ತಂದೆ ತಾಯಿ ಹಲವು ವರ್ಷ ಬೇರೆ ಬೇರೆ ಆಸ್ಪತ್ರೆ ಅಲಿಯುತ್ತಾರೆ. ದೇವರಲ್ಲಿ ಮೊರೆ ಹೋಗುತ್ತಾರೆ. ತಮಗೇ ಏಕೆ ಇಷ್ಟು ಕಷ್ಟವೆಂದು ದುಃಖಿಸುತ್ತಾರೆ. ಆಗ ಪಕ್ಕದ ಮನೆಯಲ್ಲಿರುವ ಹಿಂದೂ, ನಿಜ ಹೇಳಿ ನೀವು 1 ಜೊತೆ ಕುರಿ ಕೊಡುತ್ತೇನೆ ಎಂದು ಹರಕೆ ಹೊತ್ತಿದ್ದಿರಿ ಅಲ್ಲವೇ..? ಆದರೆ ಕೊಟ್ಟು 1 ಕುರಿಯಲ್ಲವೇ ಎಂದು ಕೇಳುತ್ತಾನೆ. ಆ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡು ಮತ್ತೆ ತಾಯಿಯಲ್ಲಿಗೆ ಹೋಗುತ್ತಾರೆ. ಆದರೆ ಆತನ ಆ ಒಂದು ತಪ್ಪಿಗಾಗಿ, ದೇವಿ ಅವನನ್ನು ಎಂದಿಗೂ ಕ್ಷಮಿಸುವುದಿಲ್ಲ. ಇಂದಿನವರೆಗೂ ಆ ವ್ಯಕ್ತಿಯ ಮಗ ಮಾತನಾಡುವುದೂ ಇಲ್ಲ, ಅವನಿಗೆ ಕಿವಿಯೂ ಕೇಳುವುದಿಲ್ಲ.

- Advertisement -

Latest Posts

Don't Miss