Thursday, December 26, 2024

Latest Posts

Health tips: ಹಣ್ಣಿನ ಸೇವನೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

- Advertisement -

Health Tips: ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಹಣ್ಣಿನ ಸೇವನೆ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ತಿನ್ನುವ ವಿಧಾನ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಹಣ್ಣಿನ ಸೇವನೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ನಾವು ಸೇವಿಸುವ ಹಲವು ಹಣ್ಣುಗಳನ್ನು ಸಿಪ್ಪೆ ಸಹಿತವಾಗಿಯೇ ತಿನ್ನಬೇಕು. ಉದಾಹರಣೆಗೆ ಚಿಕ್ಕು, ಸೇಬು, ದ್ರಾಕ್ಷಿ. ಈ ಹಣ್ಣುಗಳನ್ನು ಸಿಪ್ಪೆ ಸಹಿತವಾಗಿಯೇ ತಿನ್ನಬೇಕು. ಏಕೆಂದರೆ ಇದರ ಸಿಪ್ಪೆಯಲ್ಲಿಯೇ ಸತ್ವವಿರುತ್ತದೆ. ಆದರೆ ಕೆಲವರು ಈ ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಅಥವಾ ಮಿಲ್ಕ್ ಶೇಕ್ ಮಾಡಿ ಕುಡಿಯುತ್ತಾರೆ. ಆದರೆ ಹಣ್ಣನ್ನು ಸಿಪ್ಪೆ ಸಹಿತವಾಗಿ, ತಿಂದರೆ ಮಾತ್ರ ಅದರಲ್ಲಿರುವ ಪೋಷಕಾಂಶ ನಮ್ಮ ದೇಹ ಸೇರಲು ಸಾಧ್ಯ. ಆದರೆ ಇದರ ಸೇವನೆ ಮಾಡುವ ಮುನ್ನ ಬಿಸಿ ನೀರಿನಲ್ಲಿ ಉಪ್ಪು ಹಾಕಿ, ಅದರಲ್ಲಿ ಈ ಹಣ್ಣುಗಳನ್ನು ನೆನೆಸಿಟ್ಟು, ತೊಳೆದು ತಿನ್ನಬೇಕು.

ಹಣ್ಣಿನ ಸೇವನೆ ಮಾಡುವಾಗ ನಾವು ಮಾಡುವ ಎರಡನೇಯ ತಪ್ಪು ಅಂದ್ರೆ, ಹಣ್ಣಿನ ಸೇವನೆ ಮಾಡುವ ಬದಲು, ಅದರ ರಸ ತೆಗೆದು ಜ್ಯೂಸ್ ಮಾಡಿ ಕುಡಿಯುವುದು. ಹೀಗೆ ಮಾಡುವುದರಿಂದ ಹಣ್ಣಿನಲ್ಲಿರುವ ನಾರಿನಂಶ ಕಳೆದು ಹೋಗುತ್ತದೆ. ಅಂಥ ರಸದ ಸೇವನೆಯಿಂದ ನಮ್ಮ ದೇಹಕ್ಕೆ ಅತ್ಯಂತ ಕಡಿಮೆ ಪೋಷಕಾಂಶ ದೊರೆಯುತ್ತದೆ.

ಮೂರನೇಯ ತಪ್ಪು ಅಂದ್ರೆ, ಹಣ್ಣುಗಳನ್ನು ಮಿಕ್ಸ್ ಮಾಡಿ ಫ್ರೂಟ್ ಸಲಾಡ್‌ನಂತೆ ಸೇವಿಸುವುದು. ಹಣ್ಣುಗಳನ್ನು ಒಂದೊಂದಾಗಿ ತಿನ್ನಬೇಕು. ಅದನ್ನು ಬಿಟ್ಟು, ಹಲವು ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಅದರಲ್ಲೂ ಸಿಟ್ರಿಕ್ ಆ್ಯಸಿಡ್ ಇರುವ ಹಣ್ಣುಗಳು ಮತ್ತು ಸಿಹಿ ಹಣ್ಣುಗಳನ್ನು ಮಿಕ್ಸ್ ಮಾಡಿ ತಿಂದರೆ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.

- Advertisement -

Latest Posts

Don't Miss