Health Tips: ನಾವು ಯಾರನ್ನಾದರೂ ಭೇಟಿಯಾದಾಗ, ಮಾತನಾಡುವಾಗ, ಸಂದರ್ಶನಕ್ಕೆ ಹೋಗುವಾಗ, ಅಥವಾ ಡೇಟಿಂಗ್ ಮಾಡುವಾಗ, ಮಾತನಾಡುವುದು , ನಗುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗೆ ಮಾತನಾಡುವಾಗ, ನಗುವಾಗ ನಮ್ಮ ಹಲ್ಲು ಚೆಂದವಾಗಿ ಕಾಣುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಹಲ್ಲಿನ ಹಳದಿತನವನ್ನು ಹೋಗಲಾಡಿಸಲು ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಮೊದಲನೇಯ ಟಿಪ್ಸ್ ಅಂದ್ರೆ ಬಾಳೆ ಹಣ್ಣಿನ ಸಿಪ್ಪೆಯ ಒಳಭಾಗವನ್ನು ಬಳಸಿ, ನಿಮ್ಮ ಹಲ್ಲು ಉಜ್ಜಬೇಕು. ನಿಧಾನವಾಗಿ 5 ನಿಮಿಷ ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿದರೆ, ನಿಮ್ಮ ಹಲ್ಲು ಬಿಳಿಯಾಗುತ್ತದೆ. ಪ್ರತಿದಿನ ಇದನ್ನು ಅನುಸರಿಸಿದರೆ ಉತ್ತಮ.
ಎರಡನೇಯ ಟಿಪ್ಸ್ ಭಾರೀ ಹಳೆಯ ಕಾಲದ ಟಿಪ್ಸ್. ಬೇವಿನ ಕಡ್ಡಿಯಿಂದ ಹಲ್ಲುಜ್ಜುವುದು. ಬೇವಿನ ಕಡ್ಡಿಯಿಂದ ಹಲ್ಲು ಉಜ್ಜುವುದರಿಂದ ನಿಮ್ಮ ಹಲ್ಲು ಬಿಳಿಯಾಗುವುದಲ್ಲದೇ, ವೈದ್ಯರ ಬಳಿ ಹೋಗದೇ ನೀವೂ ನಿಮ್ಮ ಹುಳುಕು ಹಲ್ಲನ್ನು ಸರಿ ಮಾಡಿಕೊಳ್ಳಬಹುದು. ಇದು ಈ ಟಿಪ್ಸ್ ಬಳಸಿ, ಅನುಭವ ಪಡೆದವರ ಮಾತು.
ಮೂರನೇ ಟಿಪ್ಸ್ ಅಂದ್ರೆ ನೆಲ್ಲಿಕಾಯಿ ರಸ. ನೆಲ್ಲಿಕಾಯಿ ಆರೋಗ್ಯಕ್ಕೆ ಅದೆಷ್ಟು ಉತ್ತಮ ಅಂದ್ರೆ, ಇದರ ಬಳಕೆಯಿಂದ ನಿಮ್ಮ ಕೂದಲಿನ ರಕ್ಷಣೆ, ತ್ವಚೆಯ ರಕ್ಷಣೆ ಸೇರಿ ಹಲವು ಸೌಂದರ್ಯ ಮತ್ತು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಅದೇ ರೀತಿ ಹಲ್ಲಿನ ಸೌಂದರ್ಯ ಚೆನ್ನಾಗಿಡಬೇಕು ಅಂದ್ರೆ ನೀವು ನೆಲ್ಲಿಕಾಯಿಯ ಬಳಕೆ ಮಾಡಬೇಕು.
ಒಂದು ಕಪ್ ನೀರಿಗೆ 1 ಸ್ಪೂನ್ ನೆಲ್ಲಿಕಾಯಿ ರಸ ಹಾಕಿ ಮಿಕ್ಸ್ ಮಾಡಿ. ಬಳಿಕ ಕೊಂಚ ಕೊಂಚ ಈ ನೀರನ್ನು ಬಾಯಿಗೆ ಹಾಕಿ, ಚೆನ್ನಾಗಿ ಬಾಯಿ ಮುಕ್ಕಳಿಸಿ. ಇದರಿಂದ ನಿಮ್ಮ ಹಲ್ಲು ಬಿಳಿಯಾಗುತ್ತದೆ.
ಲವಂಗದೆಣ್ಣೆ ಬಳಸಿ ನೀವು ನಿಮ್ಮ ಹಲ್ಲನ್ನು ಬಿಳಿ ಮಾಡಿಕೊಳ್ಳಬಹುದು. ಬ್ರಶ್‌ನ್ನು ಕ್ಲೀನ್ ಮಾಡಿ, ಅದರ ಮೇಲೆ ಕೊಂಚ ಲವಂಗದೆಣ್ಣೆ ಹಾಕಿ, ಹಲ್ಲುಜ್ಜಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ಹಲ್ಲು ಬಿಳಿಯಾಗಿ, ಆರೋಗ್ಯಕರವಾಗಿ ಇರುತ್ತದೆ.