Thursday, December 12, 2024

Latest Posts

20 ವರ್ಷದ ದಾಂಪತ್ಯ ಜೀವನ ಅಂತ್ಯಗೊಳಿಸಿದ ನಟ ಧನುಷ್- ಐಶ್ವರ್ಯಾ..

- Advertisement -

Movie News: ರಜನಿಕಾಂತ್ ಅಳಿಯ ನಟ ಧನುಷ್ ಮತ್ತು ಐಶ್ವರ್ಯಾ ಡಿವೋರ್ಸ್ ತೆಗೆದುಕೊಳ್ಳಲಿದ್ದಾರೆಂದು ಈಗಾಗಲೇ ಎಲ್ಲರಿಗೂ ಗೊತ್ತಿತ್ತು. ಆದರೆ ಕೆಲ ದಿನಗಳ ಹಿಂದೆ, ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು, ಇವರಿಬ್ಬರು ಮತ್ತೆ ಒಂದಾಗಲಿದ್ದಾರೆಂದು ಅಭಿಮಾನಿಗಳು ನಂಬಿದ್ದರು. ಆದರೆ ಆ ನಂಬಿಕೆ ಸುಳ್ಳಾಗಿದ್ದು, ಇಂದು ಧನುಷ್ ಮತ್ತು ಐಶ್ವರ್ಯ ವಿಚ್ಛೇದನ ತೆಗೆದುಕೊಂಡು, 20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಚೆನ್ನೈನ ಕೌಟುಂಬಿಕ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಧನುಷ್ ಮತ್ತು ಐಶ್ವರ್ಯಾಗೆ ವಿಚ್ಛೇದನ ಸಿಕ್ಕಿದೆ. 2022ರಲ್ಲೇ ಇವರಿಬ್ಬರು ದೂರವಾಾಗಿದ್ದು, ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ತಾಯಿಯೊಂದಿಗೆ ವಾಸ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ರಜನಿಕಾಂತ್ ಜೊತೆ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಕುಳಿತಿದ್ದ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಇದನ್ನು ನೋಡಿದ ಧನುಷ್ ಫ್ಯಾನ್ಸ್ ಇವರಿಬ್ಬರು ಮತ್ತೆ ಒಂದಾಾಗುತ್ತಿದ್ದಾರೆ. ರಜನಿಕಾಂತ್ ಇಬ್ಬರ ನಡುವೆ ಸಂಧಾನ ಮಾಡಿದ್ದು, ಮಕ್ಕಳ ಸಲುವಾಗಿ, ಮತ್ತೆ ವೈವಾಹಿಕ ಜೀವನ ಮುಂದುವರಿಸುತ್ತಿದ್ದಾರೆಂದು ತಿಳಿದಿದ್ದರು. ಆದರೆ ನಿನ್ನೆ ಡಿವೋರ್ಸ್ ಸಿಕ್ಕಿದ್ದು, ದೂರವಾಗುವುದು ಕನ್ಫರ್ಮ್ ಆಗಿದೆ.

ಇನ್ನು ಇತ್ತೀಚೆಗೆ ನಯನತಾರಾ ಧನುಷ್ ವಿರುದ್ಧ ಆರೋಪ ಮಾಡಿದ್ದು, ತಮ್ಮ ಮದುವೆ ಡಾಕ್ಯೂಮೆಂಟರಿಯಲ್ಲಿ ಅವರ ಸಿನಿಮಾ ಸೀನ್ ಬಳಸಿದ್ದಕ್ಕೆ, 10 ಕೋಟಿ ರೂಪಾಯಿ ಕೊಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು ಎಂದು ನಯನತಾರಾ ಆರೋಪಿಸಿದ್ದರು. ಅಲ್ಲದೇ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆಂದು ಧನುಷ್ ವಿರುದ್ಧ ನಯನತಾರಾ ಆರೋಪಿಸಿದ್ದರು.

- Advertisement -

Latest Posts

Don't Miss