ನೀರೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಳೆ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ ಮತ ಬೇಧವಿಲ್ಲದೇ ಎಲ್ಲ ಹೆಣ್ಣು ಮಕ್ಕಳು ಬಳೆ ಧರಿಸುತ್ತಾರೆ. ಆದ್ರೆ ನಿಮ್ಮ ಬಳೆಗಳನ್ನು ನಿಮಮ ಮನೆ ಹೆಣ್ಣುಮಕ್ಕಳಿಗೆ ಬಿಟ್ಟು, ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ಅಥವಾ ಗೆಳತಿಯರಿಗೆ ನೀಡಬಾರದು. ಹೆಣ್ಣು ಮಕ್ಕಳಿಗೆ ಎಷ್ಟು ಒಡವೆ ವಸ್ತ್ರ ಇದ್ದರೂ ಮತ್ತು ಬೇಕು ಎನ್ನಿಸುತ್ತದೆ. ನಿಮ್ಮ ಬಳಿ ಹೆಚ್ಚು ಒಡವೆ ವಸ್ತ್ರ ಇರುವುದನ್ನ ನೋಡಿ ಅಕ್ಕ ಪಕ್ಕದ ಮನೆಯವರು ತಮಗೂ ಒಂದು ದಿನ ಹಾಕಲು ಕೊಡಿ ಎಂದು ಕೇಳಬಹುದು. ಆದ್ರೆ ನಿಮ್ಮ ಕೈಬಳೆಯನ್ನ ಮಾತ್ರ ಎಂದಿಗೂ ತೆಗೆದುಕೊಡಬೇಡಿ.
ಮನೆಗೆ ಬರೋ ಮುತ್ತೈದೆಯರಿಗೆ ಅರಿಷಿನ ಕುಂಕುಮ ನೀಡೋದು ಹಿಂದೂಗಳ ಸಂಪ್ರದಾಯ. ಆದ್ರೆ ಇಲ್ಲಿ ಕೆಲ ಮಹಿಳೆಯರು ಮಾಡುವ ತಪ್ಪಂದ್ರೆ ತಾವು ಬಳಸೋ ಅರಿಷಿನ ಕುಂಕುಮವನ್ನೇ ಬಂದ ಹೆಣ್ಮಕ್ಕಳಿಗೂ ಕೊಟ್ಟು ಬಿಡುತ್ತಾರೆ. ಆದ್ರೆ ಹೀಗೆ ಮಾಡಬಾರದು. ನೀವು ಬಳಸಲು ಬೇರೆ ಅರಿಷಿನ – ಕುಂಕುಮ ತೆಗೆದಿಟ್ಟುಕೊಳ್ಳಬೇಕು. ಮತ್ತು ಮನೆಗೆ ಬಂದ ಹಣ್ಣು ಮಕ್ಕಳಿಗೆ ಕೊಡಲು ಬೇರೆ ಅರಿಷಿನ – ಕುಂಕುಮ ಎತ್ತಿಡಬೇಕು.
ನೀವು ತಲೆಗೆ ಮುಡಿದ ಹೂವನ್ನ ಬೇರೆಯವರಿಗೆ ಬಿಚ್ಚಿ ಕೊಡಬಾರದು. ಉದಾಹರಣೆಗೆ ನೀವು ಮುಡಿದ ಮಲ್ಲಿಗೆಯ ಘಮ ಉತ್ತಮವಾಗಿದ್ದು, ನಿಮ್ಮ ಗೆಳತಿ ಅದನ್ನ ನೋಡಿ ಅದರಲ್ಲಿ ಸಣ್ಣ ತುಂಡು ತಮ್ಮ ಕೂದಲಿಗೆ ಹಾಕಲು ಕೇಳಿದಾಗ, ನೀವು ಬಿಚ್ಚಿ ಕೊಡಬಾರದು. ನೀವು ಧರಿಸಿದ ಹೂವಿನ ಮಾಲೆಯಿಂದ ಒಂದು ಹೂವು ಕೂಡ ಬೇರೆ ಹೆಣ್ಣುಮಕ್ಕಳಿಗೆ ನೀಡಿದರೆ, ನಿಮ್ಮ ಪುಣ್ಯವೆಲ್ಲ ಅವರಿಗೆ ಹೋಗಿ ಅವರ ಪಾಪವೆಲ್ಲ ನಿಮಗೆ ಬರುತ್ತದೆ.
ನೀವು ಬಳಸುವ ಚಿನ್ನ ಮತ್ತು ಬೆಳ್ಳಿ ಸಾಮಗ್ರಿಯನ್ನ ಸಂಬಂಧಿಕರಿಗೆ ಬಿಟ್ಟು ಬೇರೆಯವರಿಗೆ ನೀವು ನೀಡಕೂಡದು. ಸ್ನೇಹಿತರಿಗೆ ಅಥವಾ ಪರಿಚಯದವರಿಗೆಲ್ಲ ನೀವು ಬಳಸುವ ಚಿನ್ನ- ಬೆಳ್ಳಿ ನೀಡಕೂಡದು. ಚಿನ್ನವನ್ನ ಲಕ್ಷ್ಮೀ ಎನ್ನಲಾಗುತ್ತದೆ. ಬೆಳ್ಳಿ ಬೆಳಕು ಎನ್ನಲಾಗುತ್ತದೆ. ಹಾಗಾಗಿ ನೀವು ಬಳಸುವ ಚಿನ್ನ- ಬೆಳ್ಳಿ ಬೇರೆಯವರಿಗೆ ನೀಡಿದರೆ, ನಿಮ್ಮ ಅದೃಷ್ಟ ಮತ್ತು ನಿಮ್ಮ ಮನೆಯ ಬೆಳಕು ಬೇರೆಯವರಿಗೆ ಕೊಟ್ಟಂತಾಗುತ್ತದೆ.
ಅಂತೆಯೇ ನೀವು ಬಳಸುವ ಕಾಡಿಗೆ ಕೂಡ ಬೇರೆಯವರಿಗೆ ನೀಡಬೇಡಿ. ಬೇಕಾದರೆ ಬೇರೆಯವರಿಗೆ ನೀಡುವುದಕ್ಕೆ ಅಂತಲೇ ಬೇರೆ ಕಾಡಿಗೆ ಡಬ್ಬವನ್ನ ತಂದಿಡಿ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.