Saturday, April 19, 2025

Latest Posts

ನಿಮ್ಮಲ್ಲಿ ಇರೋ ರೆಬ್ಬಲ್ ಕ್ಯಾರೆಕ್ಟರ್ ತೋರಿಸೋದೆ UI: ರಿಯಲ್ ಸ್ಟಾರ್ ಉಪೇಂದ್ರ

- Advertisement -

Sandalwood News: ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ಯುಐ ಸಿನಿಮಾದ ವಾರ್ನರ್ ರಿಲೀಸ್ ಆಗಿದೆ. ಈ ಕಾರಣಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಉಪೇಂದ್ರ, ಟ್ರೈಲರ್ ಟಿಸರ್ ಬೇಡ ಅಂತಾ ವಾರ್ನರ್ ಬಿಟ್ಟಿದೀವಿ. ನನಗೆ ಏನು ಹೇಳ್ಬೇಕೋ ಅದನ್ನೆ ತೋರಿಸಿದ್ದೀನಿ. ನೀವ್ ಮಾಡಿ ನೀನ್ ನೋಡು ಅಂದ್ರೆ ಪ್ರಾಬ್ಲಂಗೆ ಸಾಲ್ಯೂಷನ್ ಸಿಗಲ್ಲ. Ui ಅಲ್ಲಿ ಅರ್ಥ ಮಾಡ್ಕೊಳೋದು ಕಷ್ಟ ಆದ್ರೆ ಚನಾಗಿರತ್ತೆ. ನನಗೆ ಪವರ್ ಸಿಕ್ಕಿದ್ರೆ ಅಷ್ಟೇ ಎಂದು ಹೇಳಿದ್ದಾರೆ.

ಹಾಲಿಡೇ ಸೀಸನ್ ಅಲ್ಲಿ ಸಿನಿಮಾ ಬಿಟ್ಟಿದ್ದೀನಿ. ಸೂಪರ್ ಸಿನಿಮಾಕ್ಕೂ ಈ ಸಿನಿಮಾಕ್ಕೂ ಡಿಫ್ರೆನ್ಸ್ ಇದೆ. ಇಡಿ ಸಿನಿಮಾದಲ್ಲಿ ಕಥೇನೆ ಬೇರೆ ಇದೆ. ನನ್ನ ಪ್ರಯತ್ನ ಸಾರ್ವಜನಿಕರನ್ನು ಎಚ್ಚರಿಸುವುದು. ನಿಮ್ಮಲ್ಲಿ ಇರೋ ರೆಬ್ಬಲ್ ಕ್ಯಾರೆಕ್ಟರ್ ತೋರಿಸೋದೆ ui. ಸಾಧು ಅವ್ರು ಹೇಳ್ತಾರೆ ನೀವು ಅನ್ ಸ್ಯಾಟಿಫೆಕ್ಷನ್ ಡೈರೆಕ್ಟರ್ ಅಂತಾ. ನಾನ್ ಜಗಳ ಕೂಡಾ ಆಡಿದೀನಿ. ನಾನ್ ಏನೂ ತೋರಿಸಲ್ಲ ಥೇಟರ್ ಅಲ್ಲೆ ನೋಡ್ಬೇಕು ಎಂದು ನಟ ಉಪೇಂದ್ರ ಹೇಳಿದ್ದಾರೆ.

ಉಪೇಂದ್ರ ನಿರ್ದೇಶನದ ಯುಐ ವಾರ್ನರ್ ರಿಲೀಸ್ ಆಗಿದೆ. ವಾರ್ನರ್ ಅಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ಕುತೂಹಲ ಇತ್ತು. ಟೀಸರ್ ಓಕೆ, ಟ್ರೇಲರ್ ಓಕೆ ಇದೆಂಥದ್ದು ವಾರ್ನರ್ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಅವರ ಅನೇಕ ಅಭಿಮಾನಿಗಳ ಪ್ರಶ್ನೆಗೆ ವಾರ್ನರ್ ಉತ್ತರ ಕೊಟ್ಟಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ ವಾರ್ನರ್ ಭರ್ಜರಿ ಚರ್ಚೆಗೆ ಕಾರಣವಾಗಿದೆ. ಉಪೇಂದ್ರ ಈ ವಾರ್ನರ್ ಮೂಲಕ ಯುಐ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿರೋದು ಸುಳ್ಳಲ್ಲ.

- Advertisement -

Latest Posts

Don't Miss