- Advertisement -
Recipe: ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮಾನವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಎಳ್ಳಿನ ಲಾಡು ಮಾಡೋದು ಹೇಗೆ ಅಂತಾ ತಿಳಿಯಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಎಳ್ಳು, 1 ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಘಮ ಬರುವವರೆಗೂ ಎಳ್ಳು ಹುರಿದುಕೊಳ್ಳಿ. ಬಳಿಕ ಹುರಿದ ಎಳ್ಳನ್ನು ಬದಿಗಿರಿಸಿ, ಪ್ಯಾನ್ ಬಿಸಿ ಮಾಡಿ, ತುಪ್ಪ ಬೆಲ್ಲ ಹಾಕಿ, ಪಾಕ ತಯಾರಿಸಿಕೊಳ್ಳಿ. ಪಾಕ ರೆಡಿಯಾದ ಬಳಿಕ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಬಳಿಕ ಹುರಿದ ಎಳ್ಳು ಸೇರಿಸಿ, ಮಿಕ್ಸ್ ಮಾಡಿ. ಈ ಮಿಶ್ರಣ ಬಿಸಿ ಇರುವಾಗಲೇ, ಲಡ್ಡು ತಯಾರಿಸಿ. ಅಥವಾ ಒಂದು ಪ್ಲೇಟ್‌ಗೆ ತುಪ್ಪ ಸವರಿ, ಅದರ ಮೇಲೆ ಈ ಮಿಶ್ರಣ ಹರಡಿ, ಎಳ್ಳಿನ ಚಿಕ್ಕಿ ತಯಾರಿಸಬಹುದು.
- Advertisement -