Recipe: ಚಳಿಗಾಲದಲ್ಲಿ ಆದಷ್ಟು ದೇಹವನ್ನು ಬೆಚ್ಚಗಿಡಬೇಕು. ಅದೇ ರೀತಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ನಾವಿಂದು ಆರೋಗ್ಯಕ್ಕೆ ಅತ್ಯುತ್ತಮ ರೆಸಿಪಿ ಆಗಿರುವ ಡ್ರೈಫ್ರೂಟ್ಸ್ ಲಡ್ಡು ರೆಸಿಪಿ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಕೊಂಚ ತುರಿದ ಒಣ ಕೊಬ್ಬರಿ, ಕಾಲು ಕಪ್ ಅಂಟು, ಬಾದಾಮ್, ಅಖ್ರೋಟ್, ಖರ್ಜೂರ, ಅಂಜೂರ, ಪಿಸ್ತಾ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ, ದ್ರಾಕ್ಷಿ, ಗೋಡಂಬಿ, ಹೀಗೆ ಯಾವುದು ಬೇಕೋ ಆ ಡ್ರೈಫ್ರೂಟ್ಸ್, ಒಂದು ಕಪ್ ಬೆಲ್ಲ. ಅವಶ್ಯಕತೆ ಇದ್ದಲ್ಲಿ, ಹುರಿದ ಎಳ್ಳು, ಹುರಿದ ಶೇಂಗಾಾ, ಹುರಿಗಡಲೆ ಸೇರಿಸಿಕೊಳ್ಳಬಹುದು.
ಮಾಡುವ ವಿಧಾನ: ಮೊದಲು ಪ್ಯಾಾನ್ ಬಿಸಿ ಮಾಡಿ, ತುಪ್ಪ ಹಾಕಿ, ತುಪ್ಪ ಬಿಸಿಯಾದ ಬಳಿಕ ಅಂಟು ಹಾಕಿ ಕರಿದುಕೊಳ್ಳಿ. ಅಂಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಈಗ ಅದೇ ಪ್ಯಾನ್ ಮತ್ತೊಂದು ಸ್ವಲ್ಪ ತುಪ್ಪ ಹಾಕಿ ಒಂದೊಂದಾಗಿ ಎಲ್ಲ ಡ್ರೈಫ್ರೂಟ್ಸ್ ಹುರಿದುಕೊಳ್ಳಿ. ಒಣಕೊಬ್ಬರಿ ತುರಿ ಕೂಡ ಹುರಿದುಕೊಳ್ಳಿ.
ಬಳಿಕ ಅದೇ ಪ್ಯಾನ್‌ಗೆ ತುಪ್ಪ ಮತ್ತು ಬೆಲ್ಲ ಹಾಕಿ ಪಾಕ ತಯಾರಿಸಿ. ಪಾಕ ತಯಾರಾದ ಬಳಿಕ ಹುರಿದಿಟ್ಟುಕೊಂಡ ಎಲ್ಲ ಮಿಶ್ರಣ ಸೇರಿಸಿ, ಬಿಸಿ ಇರುವಾಗಲೇ ಲಡ್ಡು ತಯಾರಿಸಿದರೆ, ಆರೋಗ್ಯಕರ ಡ್ರೈಫ್ರೂಟ್ಸ್ ಲಡ್ಡು ರೆಡಿ.