Spiritual: ಕೆಲವೊಮ್ಮೆ ನಮ್ಮ ಜೀವನದಲ್ಲಿ ಹಲವು ರೀತಿಯ ಗುಣವುಳ್ಳ ಜನರು ಬಂದು ಹೋಗುತ್ತಾರೆ. ಕೆಲವರು ನಮ್ಮ ಜೀವನದಲ್ಲಿ ಪರ್ಮ್‌ನೆಂಟ್ ಆಗಿ ಉಳಿದರೆ, ಇನ್ನು ಕೆಲವರು ಅತಿಥಿಯಂತೆ ಬಂದು ಹೋಗಿ ಬಿಡುತ್ತಾರೆ. ಆದರೆ ಹಾಗೆ ಅತಿಥಿಯಾಗಿ ಬರುವವರು, ಕೆಟ್ಟ ಗುಣಗಳಿಂದ ತುಂಬಿದ್ದರೆ, ನಿಮ್ಮ ಜೀವನದ ನೆಮ್ಮದಿಯನ್ನೇ ಕಸಿದುಕೊಂಡು ಹೋಗುತ್ತಾರೆ. ಹಾಗಾಗಿ ನಾವು ಕೆಲವರಿಗೆ ದೂರವೇ ಇರಬೇಕು ಅಂತಾರೆ ಚಾಣಕ್ಯರು. ಇಂದು ನಾವು ಯಾರಿಂದ ಸದಾ ದೂರವಿರಬೇಕು ಅಂತಾ ತಿಳಿಯೋಣ.
ನಂಬಿಕೆಗೆ ಅರ್ಹರಲ್ಲದವರು. ನಿಮಗೆ ಪರಿಚಯವಾದವರು ನಂಬಿಕೆೆಗೆ ಅರ್ಹರಲ್ಲದವರು ಅಂತಾ ಗೊತ್ತಾದ ತಕ್ಷಣ ನೀವು ಅಂಥವರಿಂದ ದೂರವಿರುವುದು ಉತ್ತಮ. ಏಕೆಂದರೆ, ಇಂಥವರ ಸಂಗ ಮಾಡಿದರೆ, ಮುಂದೆ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ. ಹಾಗಾಗಿ ಒಂಟಿಯಾಗಿ ಇದ್ದರೂ ಉತ್ತಮ. ಆದರೆ ನಂಬಿಕೆಗೆ ಅರ್ಹರಲ್ಲದವರ ಸಂಗ ಮಾಡಬೇಡಿ ಎಂದಿದ್ದಾರೆ ಚಾಣಕ್ಯರು.
ಬರೀ ಋಣಾತ್ಮಕವಾಗಿ ಯೋಚಿಸುವವರು. ಬರೀ ಋಣಾತ್ಮಕವಾಗಿ ಯೋಚಿಸುವವರೇ ನಿಮಗೆ ಸಿಕ್ಕರು ಎಂದಿಟ್ಟುಕೊಳ್ಳಿ. ಅಂಥವರಿಗೆ ದೂರವಾಗಲು ಸಾಧ್ಯವಾದರೆ, ಬೇಗ ದೂರವಾಗಿ, ಇಲ್ಲವಾದಲ್ಲಿ, ಅಂಥವರಿಂದ ಅಂತರ ಕಾಯ್ದುಕೊಳ್ಳಿ. ಏಕೆಂದರೆ ಇಂಥವರು ತಾವೂ ಬೆಳೆಯುವುದಿಲ್ಲ. ನಿಮಗೂ ಬೆಳೆಯಲು ಬಿಡುವುದಿಲ್ಲ.
ದುಷ್ಚಟಗಳನ್ನು ಹೊಂದಿರುವವರು. ಅಡ್ಡದಾರಿ ಹಿಡಿದವರು, ಕುಡಿತದಂಥ ದುಷ್ಚಟಗಳನ್ನು ಹೊಂದಿರುವವರ ಜೊತೆ ಎಂದಿಗೂ ಸಂಗ ಮಾಡಬೇಡಿ. ಇಂಥವರಿಂದ ನಿಮಗೆ ಸದಾ ಅವಮಾನವೇ ಆಗುತ್ತದೆ. ನಷ್ಟವೇ ಆಗುತ್ತದೆ.
ಸ್ವಾರ್ಥ ಭಾವನೆ ಉಳ್ಳವರು. ಸ್ವಾರ್ಥ ಭಾವನೆ ಉಳ್ಳವರು ನಿಮ್ಮ ಜೀವನದಲ್ಲಿ ಬಂದೇ ಬರುತ್ತಾರೆ. ಏಕೆಂದರೆ, ಪ್ರತೀ ನೂರರಲ್ಲಿ 50 ಜನ ಸ್ವಾರ್ಥಿಗಳೇ ತುಂಬಿದ್ದಾರೆ. ಹಾಗಾಗಿ ಕೆಲವು ಸ್ವಾರ್ಥಿಗಳು ನಿಮ್ಮ ಜೀವನದಲ್ಲಿ ಬಂದು ಹಾಗೇ ಉಳಿದುಕೊಳ್ಳಬಹುದು. ಅಂಥ ಸ್ವಾರ್ಥಿಗಳಿಗೆ ನೀವು ಬೇಕು. ನಿಮ್ಮ ಅವಶ್ಯಕತೆ ಸದಾ ಇರುತ್ತದೆ. ಆದರೆ ಅವರೆಂದೂ ನಿಮ್ಮನ್ನು ಪ್ರೀತಿಸುವುದಿಲ್ಲ. ಇಂಥವರೊಂದಿಗೆ ಅಂತರ ಕಾಯ್ದುಕೊಳ್ಳುವುದೇ ಉತ್ತಮ.