ಪ್ರಧಾನಿಗೆ ಸಿನಿಮಾ ನೋಡಲು ಸಮಯ ಉಂಟು, ಆದರೆ ಈ ಕೆಲಸಕ್ಕೆ ಟೈಮ್ ಇಲ್ಲ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Political News: ಪ್ರಧಾನಿ ಮೋದಿ ನಿನ್ನೆ ಸಾಬರಮತಿ ರಿಪೋರ್ಟ್ ಎಂಬ ಸಿನಿಮಾ ವೀಕ್ಷಣೆ ಮಾಡಿದರು. ಈ ಸಿನಿಮಾ ಮಾಡುವುದಕ್ಕೆ ಕಾರಣ ಅಂದ್ರೆ, ಇದು ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ, ನಡೆದಿದ್ದ ಗೋಧ್ರಾ ಹತ್ಯಾಕಾಂಡ ಆಧಾರಿತ ಸಿನಿಮಾ. ಈ ಘಟನೆ ನಡೆಯುವುದಕ್ಕೆ ಕಾರಣವೇ ಮೋದಿ ಎಂದು ಆರೋಪಿಸಲಾಗಿತ್ತು.

ಇದೀಗ ಕಾಂಗ್ರೆಸ್ಸಿಗರು ಪ್ರದಾನಿ ಮೋದಿ ಸಿನಿಮಾ ನೋಡಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನಿಗಳಿಗೆ ಕಾಶ್ಮೀರ ಫೈಲ್ಸ್, ಸಾಬರಮತಿ ರಿಪೋರ್ಟ್ ಸಿನಿಮಾ ನೋಡಿ, ವಿಮರ್ಷಿಸಿ, ಪ್ರಚಾರ ಮಾಡಲು ಸಮಯವಿದೆ. ಆದ್ರೆ ಸಂಸತ್ ನಡೆಸಲು, ಆರ್ಥಿಕ ಸ್ಥಿತಿ ವಿವರಿಸಲು, ನಿರುದ್ಯೋಗ ಸಮಸ್ಯೆ ಪರಿಹರಿಸಲು, ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ.

ಪ್ರಧಾನಿಗಳು ನಿಜವಾದ ಮಣಿಪುರ ಫೈಲ್ಸ್ ನೋಡಿ, ಅದನ್ನು ಜನರಿಗೆ ವಿವರಿಸುವುದು ಯಾವಾಗ..? ಮೋದಿಯವರು ನಿಸ್ಸಂದೇಹವಾಗಿ ದೇಶದ ಅತ್ಯುತ್ತಮ ಈವೆಂಟ್ ಮ್ಯಾನೇಜರ್, ಸ್ವಯಂ ಸಮಾರಂಭಗಳ ಮಾಸ್ಟರ್ ಆಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

About The Author