Spiritual: ನೀವು ಕೆಲವರನ್ನು ನೋಡಿರಬಹುದು. ಅವರ ಬಳಿ ಶ್ರೀಮಂತಿಕೆ, ಉತ್ತಮ ಸಂಬಂಧಿಕರು, ಬೇಕಾದ ಎಲ್ಲಾ ಸುಖ ಸಂಪತ್ತು ಇರುತ್ತದೆ. ಆದರೆ ಅವರು ಸದಾ ಹ್ಯಾಪ್ ಮೋರೆ ಹಾಕಿಕೊಂಡೇ ಇರುತ್ತಾರೆ. ಇರುವುದನ್ನು ಎಂಜಾಯ್ ಮಾಡುವುದು ಬಿಟ್ಟು, ತಮ್ಮ ಇಲ್ಲದ್ದನ್ನೇ ಅವರು ಬಯಸುತ್ತಿರುತ್ತಾರೆ. ಆದರೆ ಇನ್ನು ಕೆಲವರು ಮನೆಯಲ್ಲಿ, ಜೀವನದಲ್ಲಿ ಕಷ್ಟವಿದ್ದರೂ, ಹಾಕಲು ಸರಿಯಾಗಿ ಬಟ್ಟೆ, ತಿನ್ನಲು ಊಟವಿಲ್ಲದಿದ್ದರೂ, ಮುಖದ ಮೇಲೊಂದು ಸಮಾಧಾನದ ನಗು ಹೊಂದಿರುತ್ತಾರೆ. ಯಾಕಂದ್ರೆ ಮುಂದೊಂದಿನ ನಮ್ಮ ಜೀವನವೂ ಸರಿಯಾಗುತ್ತದೆ ಎನ್ನುವ ಧೈರ್ಯ ಅವರಲ್ಲಿರುತ್ತದೆ. ಇಂದು ನಾವು ಅಂಥ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಮಿಥುನ ರಾಶಿ: ಮಿಥುನ ರಾಶಿಯವರು ಇದ್ದುದರಲ್ಲೇ ಖುಷಿ ಅನುಭವಿಸುವವರು. ಇವರಿಗೆ ಖುಷಿ ಅನುಭವಿಸಲು ದೊಡ್ಡ ದೊಡ್ಡ ವಸ್ತುಗಳು, ಎಕ್ಸ್‌ಪೆನ್ಸಿವ್ ಗಿಫ್ಟ್, ಸುಂದರವಾದ ಜಾಗ, ಇಂಥವುಗಳು ಬೇಕಾಗುವುದಿಲ್ಲ. ಮನೆಯಲ್ಲೇ ಇದ್ದು, ತಮ್ಮ ಬಳಿ ಇರುವ ವಸ್ತುಗಳನ್ನೇ ಬಳಸಿ ಖುಷಿ ಪಡುತ್ತಾರೆ. ಇವರಿಗೂ ಐಷಾರಾಮಿ ಜೀವನದ ಆಸೆ ಇರುತ್ತದೆ. ಹಾಗಂತ, ಅದನ್ನು ಪಡೆಯಲು, ಇರುವ ಸುಖ ಕಳೆದುಕೊಳ್ಳುವುದಿಲ್ಲ. ಬದಲಾಗಿ ಸದಾ ನಗು ನಗುತ್ತ, ತಮ್ಮ ಜೀವನ ನಿಭಾಯಿಸುತ್ತ, ಗುರಿಯತ್ತ ಸಾಗುವ ಗುಣ ಇವರದ್ದು.
ಧನು ರಾಶಿ: ಧನು ರಾಶಿಯವರು ಸದಾಕಾಲ ಒಬ್ಬರೇ ಇರಲು ಬಯಸುತ್ತಾರೆ. ಇವರು ಪ್ರವಾಸ ಪ್ರಿಯರು. ಪ್ರಪಂಚ ಪರ್ಯಟನೆ ಮಾಡಬೇಕು ಅನ್ನೋದು ಇವರ ಆಶಯ. ಹಾಗಂತ, ಚೆನ್ನಾಗಿ ದುಡ್ಡು ಮಾಡಿ, ಪ್ರವಾಸ ಹೋಗೋಣ ಎನ್ನುವ ಮನಸ್ಥಿತಿ ಖಂಡಿತ ಇವರದ್ದಲ್ಲ. ಜೇಬಲ್ಲಿ ಇರುವ ಕಾಸನ್ನೇ ಅಡ್ಜಸ್ಟ್ ಮಾಡಿ, ಮನಸ್ಸಾದ ಕಡೆ ಹೋಗಿ ಬರುತ್ತಾರೆ. ಅಷ್ಟರಲ್ಲೇ ಖುಷಿ ಪಡುತ್ತಾರೆ. ಜೊತೆಗೆ ಇನ್ನೂ ಹೆಚ್ಚಿನ ಯಶಸ್ಸಿಗಾಗಿ ಶ್ರಮಿಸುತ್ತಾರೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ತಾಳ್ಮೆ ಹೆಚ್ಚು. ಇವರು ನಗು ನಗುತ್ತಲೇ, ಕಷ್ಟವನ್ನೇ ಅಡ್ಜಸ್ಟ್ ಮಾಡಿಕೊಳ್ಳುವ ಸ್ವಭಾವದವರು. ಕಷ್ಟ ಎಷ್ಟೇ ಇದ್ದರೂ, ಇದೆಲ್ಲ ಏನ್ ದೊಡ್ಡದಲ್ಲ ಅಂತಾ ಒಂದು ಸ್ಮೈಲ್ ಕೊಟ್ಟು ಮುನ್ನಡೆಯುವ ಸ್ವಭಾವ ಇವರದ್ದು. ಹಾಗಾಗಿ ಇವರು ಬೆಸ್ಟ್ ಅಮ್ಮ – ಅಪ್ಪ ಅನ್ನಿಸಿಕೊಳ್ಳುತ್ತಾರೆ.
ಸಿಂಹ ರಾಶಿ: ಸಿಂಹ ರಾಶಿಯವರು ಹೆಸರಿಗೆ ತಕ್ಕಂತೆ, ನಾಯಕತ್ವದ ಗುಣ ಹೊಂದಿದವರು. ಹಾಗಾಗಿ ಸದಾಾಕಾಲ ಚೈತನ್ಯಭರಿತವಾದ ಜೀವನ ಇವರದ್ದು. ಯಾವಾಗಲೂ ಎಲ್ಲದರಲ್ಲೂ ತಾನೇ ಮುಂದಿರಬೇಕು ಎನ್ನುವ ಹುಮ್ಮಸ್ಸೇ, ಇವರನ್ನು ಏನಿಲ್ಲದಿದ್ದರೂ, ಎಲ್ಲವೂ ಇರುವ ಖುಷಿಯಲ್ಲಿ ಇಡುವಂತೆ ಮಾಡುತ್ತದೆ.