ಮೊನ್ನೆ ತಾನೇ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಹಿಡಿಯಲು ಹೋಗಿ 8 ಪೊಲೀಸರು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಕಾರಣಕ್ಕೆ ಅಲ್ಲಿನ ಪೊಲೀಸ್ ಇಲಾಖೆ ದುಬೆಯನ್ನು ಹಿಡಿಯಲು ಶತಪ್ರಯತ್ನ ನಡೆಸಿತ್ತು. 25 ಪೊಲೀಸರ ತಂಡ ರಚಿಸಿತ್ತು, ಅಲ್ಲದೇ ದುಬೆಯ ಮನಯನ್ನೂ ಧ್ವಂಸ ಮಾಡಿತ್ತು. ಸ್ವತಃ ದುಬೆಯ ತಾಯಿ ಆತನ್ನನು ಕೊಂದುಬಿಡಿ ಎಂಬ ಹೇಳಿಕೆ ನೀಡಿದ್ದರು.

ಆದ್ರೆ ಈವರೆಗೆ ದುಬೆ ಪೊಲೀಸರ ಕೈಗೆ ಸಿಗದೇ ಅಡಗಿ ಕುಳಿತಿದ್ದಾನೆ. ಆದ್ರೆ ಆತನ ಸಹಚರ ಇವತ್ತು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ವಿಕಾಸ್ ದುಬೆಯ ಆಪ್ತ ಸಹಚರನಾಗಿದ್ದ ಅಮರ್ ದುಬೆ ಎಂಬುವವನನ್ನು ಉತ್ತರಪ್ರದೇಶದ ಹಮೀರ್‌ಪುರ್ ಎಂಬಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿರುವ ಅಲ್ಲಿನ ಪೊಲೀಸ್ ಅಧಿಕಾರಿಗಳು ವಿಕಾಸ್ ದುಬೆ ಮತ್ತು ಅಮರ್ ದುಬೆ ಇಬ್ಬರನ್ನೂ ಹುಡುಕುವಲ್ಲಿ ಪೊಲೀಸರು ನಿರತರಾಗಿದ್ದರು. ಆದ್ರೆ ಅವರಿಬ್ಬರು ಪೊಲೀಸರ ಕೈಗೆ ಸಿಗಲಿಲ್ಲ. ಅದಕ್ಕಾಗಿ ಅಮರ್ ದುಬೆಯನ್ನು ಹುಡುಕಿ ಕೊಟ್ಟವರಿಗೆ 25ಸಾವಿರ ಮತ್ತು ವಿಕಾಸ್ ದುಬೆಯನ್ನು ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.
ಇವತ್ತು ಅಮರ್ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳೀಯ ಪೊಲೀಸರ ಸಹಾಯದಿಂದ ಅಮರ್‌ನನ್ನು ಎನ್‌ಕೌಂಟರ್ ಮಾಡಲಾಗಿದೆ. ಅಲ್ಲದೇ ವಿಕಾಸ್ ದುಬೆಯನ್ನು ಹಿಡಿಯಲು 40 ಪೊಲೀಸರ ತಂಡವನ್ನ ರಚನೆ ಮಾಡಲಾಗಿದೆ. ಅಲ್ಲದೇ ವಿಕಾಸ್ ದುಬೆಯನ್ನು ಹಿಡಿಯದೇ ನಾವು ವಿಶ್ರಾಂತಿ ಪಡೆಯುವುದಿಲ್ಲವೆಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.