Health tips: ಚೀಯಾ ಸೀಡ್ಸ್ ಅಂದ್ರೆ ಹೆಚ್ಚಾಗಿ ಡಯಟ್ ಮಾಡುವವರೇ ಬಳಸುವ ಪದಾರ್ಥ. ಏಕೆಂದರೆ ಚೀಯಾ ಸೀಡ್ಸ್ ನೆನೆಸಿಟ್ಟು ನೀರಿಗೆ ಹಾಕಿ ಕುಡಿದರೆ, ನಮ್ಮ ಹೊಟ್ಟೆಯ ಬೊಜ್ಜು ಇಳಿಯುತ್ತದೆ. ನಮ್ಮ ದೇಹದ ತೂಕವೂ ಕಡಿಮೆಯಾಗುತ್ತದೆ. ನಾವು ತೆಳ್ಳಗಾಗುತ್ತೇವೆ ಎಂದು. ಆದರೆ ಶುಗರ್ ಇದ್ದವರು ಕೂಡ ಚೀಯಾ ಸೀಡ್ಸ್ ಬಳಸಬೇಕು. ಇದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ಚೀಯಾ ಸೀಡ್ಸ್‌ನಲ್ಲಿ ಓಮೆಗಾ- 3 ಕಂಟೆಂಟ್, ಆ್ಯಂಟಿ ಆಕ್ಸಿಡೆಂಟ್ಸ್, ಫೈಬರ್, ಪ್ರೋಟೀಸನ್ ಇದೆ. ಇದರ ಸೇವನೆಯಿಂದ ತುಂಬ ಹೊತ್ತು ಹಸಿವಾಗುವುದಿಲ್ಲ. ಅಲ್ಲದೇ, ಕಡಿಮೆ ಆಹಾರ ಸೇವಿಸಿದರೂ ಹೊಟ್ಟೆ ತುಂಬಿಬಿಡುತ್ತದೆ. ಇದರಿಂದ ಶುಗರ್ ಇದ್ದವರ ತೂಕ ಕಂಟ್ರೋಲಿನಲ್ಲಿ ಇರುತ್ತದೆ. ಶುಗರ್ ಇದ್ದವರ ತೂಕ ಕಂಟ್ರೋಲಿನಲ್ಲಿ ಇದ್ದಾಗ, ಶುಗರ್ ಕೂಡ ಕಂಟ್ರೋಲಿನಲ್ಲಿ ಇರುತ್ತದೆ.
ಚೀಯಾ ಸೀಡ್ಸ್ ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹೈ ಶುಗರ್ ಇದ್ದವರು ಚೀಯಾ ಸೀಡ್ಸ್ ಸೇವಿಸಬೇಕು.
ಇನ್ನು ಬರೀ ಶುಗರ್ ಇದ್ದವರು ಮಾತ್ರವಲ್ಲದೇ, ಯಾವುದೇ ಸಮಸ್ಯೆ ಇಲ್ಲದವರು ಕೂಡ ಚೀಯಾ ಸೀಡ್ಸ್ ಬಳಸಬಹುದು. ಇದರಿಂದ ದೇಹದ ತೂಕ ಸರಿಯಾಗಿರುತ್ತದೆ. ಸ್ಕಿನ್ ಗ್ಲೋ ಆಗುತ್ತದೆ. ದೇಹ ತಂಪಾಗಿ, ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.