Bollywood News: 2025ರ ಆಸ್ಕರ್ ಪ್ರಶಸ್ತಿಗೆ ನಟ ಅಮೀರ್ ಖಾನ್ ನಿರ್ದೇಶನದ ಲಾಪತಾ ಲೇಡೀಸ್ ಸಿನಿಮಾ ನಾಮಿನೇಟ್ ಆಗಿತ್ತು. ಆದರೆ ಇದೀಗ ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಈ ಬಗ್ಗೆ ಘೋಷಿಸಿದ್ದು, ಲಾಪತಾ ಲೇಡೀಸ್ ಸಿನಿಮಾ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ.
ಟಾಾಪ್ 15ರಲ್ಲಿ ಬರಲು ಈ ಸಿನಿಮಾ ಅನರ್ಹವಾಗಿದ್ದು, ಈ ಸಿನಿಮಾವನ್ನು ಅಮೀರ್ ಮತ್ತು ಕಿರಣ್ ರಾವ್ ಸೇರಿ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದರು. ಮದುವೆ ಮಾಡಿಕೊಂಡು ಬರುವಾಗ, ಮಧು ಮಗಳು ಬೇರೆ ಕಡೆ ಹೋಗಿ, ಮಧು ಮಗಳ ಜಾಗಕ್ಕೆ ಇನ್ನೊಬ್ಬಳು ಬಂದಿರುತ್ತಾಳೆ. ಇದಾದ ಬಳಿಕ ಕಥೆ ಶುರುವಾಗುತ್ತದೆ. ನಟ ಆತನ ಪತ್ನಿಯನ್ನು ಹುಡುಕುವುದೇ ಒಂದು ರೋಚಕ ಸ್ಟೋರಿ. ಈ ಸಿನಿಮಾವನ್ನು ಹಲವರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲಾಪತಾ ಲೇಡೀಸ್ 2024ರ ಅತ್ಯದ್ಭುತ ಚಿತ್ರ ಎನ್ನುವ ಮೆಚ್ಚುಗೆಗೆ ಪಾತ್ರವಾಗಿತ್ತು. ಓಟಿಟಿಗೆ ಬಂದು, ಉತ್ತಮ ವೀವ್ಸ್ ಪಡೆದಿತ್ತು. ಆದರೆ ಆಸ್ಕರ್ ರೇಸ್‌ನಿಂದ ಸದ್ಯ ಲಾಪತಾ ಲೇಡೀಸ್ ಸಿನಿಮಾ ಹೊರಬಿದ್ದಿದೆ.
ಇನ್ನು ಲಾಪತಾ ಲೇಡೀಸ್ ಎಂದು ಇದ್ದ ಸಿನಿಮಾ ಟೈಟಲ್‌ನ್ನು ಲಾಸ್ಟ್ ಲೇಡೀಸ್ ಎಂದು ಬದಲಿಸಲಾಗಿತ್ತು. ಇದರ ಅರ್ಥವೂ ಕಳೆದು ಹೋದ ಮಹಿಳೆ ಎಂದೇ ಅರ್ಥ. ನ್ಯೂಯಾರ್ಕ್ ನಲ್ಲಿ ಇದರ ಸ್ಪೆಶಲ್ ಶೋ ಕೂಡ ಮಾಡಲಾಗಿತ್ತು.