Wednesday, December 18, 2024

Latest Posts

Sandalwood News: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್

- Advertisement -

Sandalwood News: ನಟ ದರ್ಶನ್ ಶಸ್ತ್ರ ಚಿಕಿತ್ಸೆ ಪಡೆಯದೇ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು.

ಪರಪ್ಪನ ಅಗ್ರಹಾಾರ ಜೈಲಿನಲ್ಲಿ ದರ್ಶನ್ ತಮಗೆ ಬೇಕಾದ ಹಾಗೆ ಇರುವ ವೀಡಿಯೋ ಲೀಕ್ ಆದ ಬಳಿಕ, ಅವರನ್ನು ಬಳ್ಳಾಾರಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ದರ್ಶನ್‌ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವು ಹೆಚ್ಚಾದರೆ, ಜೀವಕ್ಕೆ ಅಪಾಯವೆಂದು ವೈದ್ಯರು ಹೇಳಿದ ಕಾರಣ, ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ, ಶಸ್ತ್ರ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು.

ಶಸ್ತ್ರ ಚಿಕಿತ್ಸೆ ಪಡೆಯಬೇಕೆಂದು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ರೆಗ್ಯೂಲರ್ ಬೇಲ್ ಸಿಕ್ಕ ಬಳಿಕ, ಶಸ್ತ್ರ ಚಿಕಿತ್ಸೆ ಇಲ್ಲದೇ, ಫಿಸಿಯೋ ಥೆರಿಪಿ ಮೂಲಕ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಇಂದು ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ತಾನು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎನ್ನುವಂತೆ ದರ್ಶನ್ ತೋರಿಸಿಕೊಂಡಿದ್ದರು. ಆದರೆ, ದರ್ಶನ್‌ಗೆ ಇದುವರೆಗೆ ಶಸ್ತ್ರ ಚಿಕಿತ್ಸೆ ನಡೆದೇ ಇಲ್ಲ. ಇದೀಗ ಆಪರೇಶನ್ ಇಲ್ಲದೇ, ಫಿಸಿಯೋ ಥೆರಿಪಿ ಮೂಲಕ ಚಿಕಿತ್ಸೆ ಪಡೆಯಲು ದರ್ಶನ್ ನಿರ್ಧರಿಸಿದ್ದಾರೆ. ಇನ್ನು ದರ್ಶನ್‌ರನ್ನು ಮನೆಗೆ ಕರೆದೊಯ್ಯಲು ಪುತ್ರ ವಿನೀಶ್ ಆಸ್ಪತ್ರೆಗೆ ಬಂದಿದ್ದರು.

- Advertisement -

Latest Posts

Don't Miss