Political News: ದಿಢೀರ್ ಸುದ್ದಿಗೋಷ್ಠಿ ಕರೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Political News: ನಿನ್ನೆ ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಸಿದರು ಎಂದು ಆರೋಪಿಸಲಾಗಿದ್ದು, ರವಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲದೇ, ಇಂದು ಬೆಂಗಳೂರಿನ ಕೋರ್ಟ್‌ಗೂ ಹಾಜರುಪಡಿಸಲಾಗಿದೆ.

ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದು, ಕೇಸ್ ಬಗ್ಗೆ ಮಾತನಾಡಿದರು. ನಾನು ಓರ್ವ ತಾಯಿ, ಹೆಣ್ಣು ಮಗಳು, ಸಿ.ಟಿ.ರವಿ ಮಾತಿನಿಂದ ನನಗೆ ಬಹಳ ಬೇಸರವಾಗಿದೆ. ಮನಸ್ಸಿಗೆ ನೋವಾಗಿದೆ. ನಾನು ದುಃಖಿತಳಾಗಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೇಂದ್ರದಲ್ಲಿ ಅಂಬೇಡ್ಕರ್ ವಿರುದ್ಧ ಹೇಳಿಕೆ ಕೊಟ್ಟಿದ್ದಕ್ಕೆ, ನಾವು ಪರಿಷತ್‌ನಲ್ಲಿ ಪ್ರತಿಭಟನೆ ಮಾಡದೆವು. ಬಳಿಕ ನಾನು ನನ್ನಷ್ಟಕ್ಕೆ ನಾನು ಸುಮ್ಮನೆ ಕುಳಿತಿದ್ದೆ. ಆಗ ಸಿ.ಟಿ.ರವಿ ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್ ಎಂದರು. ಅದಕ್ಕೆ ನಾನು ತಾವೂ ಅಪಘಾತ ಮಾಡಿದ್ದೀರಿ. ತಾವೂ ಕೊಲೆಗಾರರಾಗ್ತೀರಿ ಎಂದೆ. ಆಗ ಸಿ.ಟಿ.ರವಿ ನನ್ನ ಬಗ್ಗೆ ಅಶ್ಲೀಲ ಪದ ಬಳಸಿ ಮಾತನಾಡಿದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ. ಬಳಿಕ ನಾನು ಸುಮ್ಮನೆ ಹೊರಗಡೆ ಬಂದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ನಾನು ಕೂಡ ಓರ್ವ ತಾಯಿ, ಓರ್ವ ಹೆಣ್ಣು ಮಗಳು, ನನ್ನನ್ನು ನೋಡಿ ಹಲವರು ರಾಜಕೀಯಕ್ಕೆ ಬರಬೇಕು ಅಂತಿದ್ದಾರೆ. ನಾನು ನನ್ನ ಪಾಡಿಗೆ ರಾಜಕೀಯ ಮಾಡುತ್ತ, ಕೈಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇನೆ. ರಾಜಕೀಯದಲ್ಲಿ ಇರಬೇಕು ಅಂದ್ರೆ ಧೈರ್ಯವಾಾಗಿರಬೇಕು. ಅಲ್ಲದೇ, ವಿಧಾನಸೌಧವನ್ನು ಹಿರಿಯರ ಚಾವಡಿ ಎಂದು ಕರೆಯುತ್ತಾರೆ. ಇಂಥ ಸ್ಥಳದಲ್ಲಿ ಅಂಥ ಪದ ಬಳಕೆ ಮಾಡಬಾರದಿತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

About The Author