Spiritual: ಮಹಿಳೆಯರು ಕೆಲವು ಕೆಲಸಗಳನ್ನು ಮಾಡಬಾರದು ಅನ್ನೋ ನಿಯಮ ಹಿಂದೂ ಧರ್ಮದಲ್ಲಿದೆ. ಆ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳು ಮೊದಲು ಎದ್ದು, ಮನೆಗೆಲಸದಲ್ಲಿ ತೊಡಗಬೇಕು. ಪೂಜೆ ಪುನಸ್ಕಾರ ಮಾಡಬೇಕು ಅಂತಾ ಹಿಂದೂ ಧರ್ಮದಲ್ಲಿ ನಿಯಮವಿದೆ. ಈ ನಿಯಮ ಅನುಸರಿಸದಿದ್ದಲ್ಲಿ, ಆಕೆ ಜೀವನದಲ್ಲಿ ಎಂದಿಗೂ ಯಶಸ್ಸು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಹಾಗಾದ್ರೆ ಮಹಿಳೆಯ ಯಾವ ಕೆಲಸ ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಇಂಥ ಸಮಯದಲ್ಲಿ ಮಲಗಬಾರದು. ಹೆಣ್ಣು ಮಕ್ಕಳು ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನ ಏಳಬೇಕು. ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು ಅನ್ನೋ ನಿಯಮವಿದೆ. ಹಾಗೆ ಮಲಗಿದರೆ, ಮಹಿಳೆಯ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಮತ್ತು ಮನೆಯಲ್ಲಿ ಜಗಳವಾಗುತ್ತದೆ. ಈ ರೀತಿ ಹೊತ್ತಲ್ಲದ ಹೊತ್ತಿಗೆ ನಿದ್ರಿಸುವುದು ದರಿದ್ರವೆಂದೇ ಪರಿಗಣಿಸಲಾಗಿದೆ.
ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಮನೆಯನ್ನು ಸದಾ ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಮನೆ ಸ್ವಚ್ಛವಾಗಿದ್ದಷ್ಟು, ಮನೆಜನರ ಮಾನಸಿಕ ನೆಮ್ಮದಿ ಚೆನ್ನಾಗಿರುತ್ತದೆ. ಅಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ.
ಕೋಪದಿಂದ ಅಡುಗೆ ಮಾಡಬಾರದು. ಅಡುಗೆ ಮಾಡುವಾಗ ಹೆಂಗಸರು ಕೋಪ ಮಾಡಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಅಂಥ ಅಡುಗೆ ಸೇವನೆ ಮಾಡುವುದರಿಂದ ಅನಾರೋಗ್ಯ ಉಂಟಾಗುತ್ತದೆ. ಅಂಥ ಅಡುಗೆಯಲ್ಲಿ ಸಾತ್ವಿಕ ಗುಣವಿರುವುದಿಲ್ಲ. ಅಂಥ ಹೆಂಗಸರು ಇರುವ ಮನೆಯಲ್ಲಿ ಅದೃಷ್ಟದ ಸುಳಿವೂ ಸಿಗುವುದಿಲ್ಲ.
ಮಾತು ಮಾತಿಗೆ ಕೋಪಿಸಿಕೊಳ್ಳುವುದು. ಯಾವ ಹೆಂಗಸು ವಿನಾ ಕಾರಣ, ಮಾು ಮಾತಿಗೂ ಕೋಪಿಸಕೊಳ್ಳುತ್ತಾಳೋ, ಅಂಥ ಹೆಂಗಸಿರುವ ಮನೆಯಲ್ಲಿ ಎಂದಿಗೂ ನೆಮ್ಮದಿ ಇರಲು ಸಾಧ್ಯವಿಲ್ಲ. ಆ ಮಹಿಳೆಯ ಜೊತೆ, ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಅಂಥ ಮಹಿಳೆಯೊಂದಿಗೆ ಜೀವಿಸಲು ಯಾರೂ ಕೂಡ ಇಷ್ಟಪಡುವುದಿಲ್ಲ. ಆಕೆಗೆ ಮನೆ ಜನರೇ ಗೌರವಿಸುವುದಿಲ್ಲ.
ಇನ್ನೊಬ್ಬರ ವಸ್ತುವಿಗೆ ಆಸೆ ಪಡುವುದು. ಯಾವ ಹೆಣ್ಣು ಬರೀ ಇನ್ನೊಬ್ಬರ ವಸ್ತುವಿಗೆ ಆಸೆ ಪಡುತ್ತಾಳೋ, ಅಥವಾ ಅದನ್ನು ಕದ್ದಾದರೂ ಸರಿ ತನ್ನದಾಗಿಸಿಕೊಳ್ಳಬೇಕು ಎಂಬ ಭಾವನೆ ಹೊಂದಿರುತ್ತಾಳೋ, ಅಂಥ ಹೆಣ್ಣು ಮಕ್ಕಳು ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ. ಸಾಾವಿನ ತನಕ ಅವರು ಉದ್ಧಾರವಾಗುವುದಿಲ್ಲ. ಹಾಗಾಗಿ ತಮ್ಮ ಬಳಿ ಇರುವ ವಸ್ತುಗಳನ್ನೇ ಬಳಸಬೇಕು, ಅತಿಯಾಸೆ ಪಡಬಾರದು ಎಂದು ಹೇಳಲಾಗಿದೆ.