ಚಿಕ್ಕವರು ಅಪ್ಪಿತಪ್ಪಿ ಸಂಜೆ ವೇಳೆ ಉಪ್ಪು, ತುಳಸಿ, ಹುಣಸೆಹಣ್ಣು ಈ ರೀತಿಯಾದ ಚಿಕ್ಕ ವಸ್ತುಗಳನ್ನು ಬೇರೆಯವರಿಗೆ ಕೊಟ್ರೆ, ಮನೆಯ ಹಿರಿಯರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಬೈಯುತ್ತಾರೆ. ಇದಕ್ಕೆ ಕಾರಣ ಕೆಲ ವಸ್ತುಗಳನ್ನ ಸಂಜೆ ಹೊತ್ತು ಅಥವಾ ಕೆಲ ದಿನಗಳಲ್ಲಿ ನೀಡಬಾರದು. ಇದರಿಂದ ಮನೆಯ ಅದೃಷ್ಟ ಹೋಗಿ, ಶಾಂತಿ ನೆಮ್ಮದಿ ಹಾಳಾಗುತ್ತದೆ ಎಂಬ ನಂಬಿಕೆ ಇದೆ.

ಇದರಂತೆಯೇ ಕೆಲ ವಸ್ತುಗಳನ್ನ ಅಮವಾಸ್ಯೆ ಹುಣ್ಣಿಮೆಯ ದಿನ ಬೇರೆಯವರಿಗೆ ಕೊಡಬಾರದು. ಕೊಟ್ಟರೆ ಏನಾಗುತ್ತದೆ..? ಯಾವುದು ಆ ವಸ್ತು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..
ಬಹುತೇಕರು ಶುಕ್ರವಾರ ಬೇರೆಯವರಿಗೆ ದುಡ್ಡು, ಸಾಲ ತೀರಿಸಲು, ಬಾಡಿಗೆ ಹಣ ಇತ್ಯಾದಿ ನೀಡಲು ಇಷ್ಟಪಡುವುದಿಲ್ಲ. ಆದ್ರೆ ಶುಕ್ರವಾರವಷ್ಟೇ ಅಲ್ಲದೇ, ಮಂಗಳವಾರ, ಅಮವಾಸ್ಯೆ ಹುಣ್ಣಿಮೆ ದಿನವೂ ಕೂಡ ಬೇರೆಯವರಿಗೆ ಸಾಲ ಕೊಡುವುದಾಗಲಿ, ಅಥವಾ ಸಾಲ ಹಿಂದಿರುಗಿಸುವುದು, ಸಹಾಯಕ್ಕಾಗಿ ದುಡ್ಡು ಕೊಡಬಾರದು ಹೀಗೆ ಮಾಡುವುದರಿಂದ ನಿಮಗೆ ದಾರಿದ್ರ್ಯತನ ಉಂಟಾಗಿ, ನಿಮ್ಮ ಅದೃಷ್ಟ ಅವರಿಗೆ ಹೋಗುತ್ತದೆ.
ನಾವು ಈ ಮೊದಲೇ ಹೇಳಿದಂತೆ ನೀವು ಧರಿಸುವ, ಅಥವಾ ಧರಿಸಿರುವ ಚಿನ್ನವನ್ನ ಬೇರೆಯವರಿಗೆ ಕೊಡಬಾರದು. ಅದರಲ್ಲೂ ಅಮವಾಸ್ಯೆ ಹುಣ್ಣಿಮೆ ಮಂಗಳವಾರ ಶುಕ್ರವಾರವಂತೂ ಚಿನ್ನ ಬೆಳ್ಳಿ ಬೇರೆಯವರಿಗೆ ನೀಡಲೇಬೇಡಿ. ಅಥವಾ ಚಿನ್ನ ಗಿರವಿ ಇಡುವಂಥ ಕಷ್ಟ ಬಂದರೂ ಈ ದಿನಗಳಲ್ಲಿ ಮಾತ್ರ ಗಿರವಿ ಇಡಬೇಡಿ.
ಅರಿಷಿನ ಕುಂಕುಮವನ್ನು ಚಿನ್ನ ಬೆಳ್ಳಿ ಎಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತಿಯದಂದು ಚಿನ್ನ ಬೆಳ್ಳಿ ತೆಗೆದುಕೊಳ್ಳಲು ಸಾಧ್ಯವಿಲ್ಲದವರು ಅರಿಷಿನ ಕುಂಕುಮವನ್ನಾದರೂ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಇಂಥ ಶುಭಕಾರಕ ವಸ್ತುವನ್ನ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಬೇರೆಯವರಿಗೆ ನೀಡಬೇಡಿ. ಬೇರೆ ದಿನಗಳಲ್ಲಿ ಹೆಣ್ಣು ಮಕ್ಕಳು ಮನೆಗೆ ಬಂದಾಗ ಅರಿಷಿನ ಕುಂಕುಮ ನೀಡಬಹುದು. ಅದಕ್ಕಾಗಿಯೇ ಬೇರೆಯವರಿಗೆ ನೀಡಲು ಸಪರೇಟ್ ಆಗಿ ಅರಿಷಿನ ಕುಂಕುಮ ತೆಗೆದಿಡಿ. ನೀವು ಬಳಸುವ ಅರಿಷಿನ ಕುಂಕುಮ ಬೇರೆಯವರಿಗೆ ನೀಡಬೇಡಿ. ಆದರೆ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಅಮವಾಸ್ಯೆಯಂದು ಬೇರೆಯವರಿಗೆ ಅರಿಷಿನ ಕುಂಕುಮ ನೀಡಬೇಡಿ.
ಇದಷ್ಟೇ ಅಲ್ಲದೇ, ಅಡುಗೆ ಮಾಡುವ ನೆಪ ಹೇಳಿ ನಿಮ್ಮ ಅಕ್ಕಪಕ್ಕದ ಮನೆಯವರು ಉಪ್ಪು, ಹುಣಸೆಹಣ್ಣು, ಅರಿಷಿನ, ಅಕ್ಕಿ- ಬೇಳೆ, ಹಾಲು ಮೊಸರು ಕೇಳಲು ಬರ್ತಾರೆ. ಆಗ ಸಂಜೆ ವೇಳೆ, ಮಂಗಳವಾರ, ಶುಕ್ರವಾರ, ಹುಣ್ಣಿಮೆ ಅಮವಾಸ್ಯೆಯಂದು ಈ ವಸ್ತುವನ್ನು ಕೊಡಬೇಡಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

