Hubli News: ಹುಬ್ಬಳ್ಳಿ: ಸುಳ್ಳಿನ ತರಬೇತಿಗೆಂದೇ ಬಿಜೆಪಿ ಯಲ್ಲಿ ಪ್ರತ್ಯೇಕ ಕೇಂದ್ರವಿದೆ. ಬಿಜೆಪಿ ಅವರಿಗೆ ಸುಳ್ಳು ಹೇಳಲು ಒಂದು ಕ್ಲಾಸ್ ಇದೆ. ಸುಳ್ಳು ಹೇಳುವ ಟ್ರೈನಿಂಗ್ ಕೊಡಲು ಒಂದು ಇನ್ಸ್ಟಿಟ್ಯೂಟ್ ಇದೆ. ಆ ಇನ್ಸ್ಟಿಟ್ಯೂಟ್ ನಲ್ಲಿ ಕಲಿತು ಬಂದ ಗಿರಾಕಿ ಸಿಟಿ ರವಿ. ಆ ಇನ್ಸ್ಟಿಟ್ಯೂಟ್ ಆರ್ ಎಸ್ ಎಸ್ ಒಂದು ಬ್ರಾಂಚ್. ಅದು ನಾಗಪುರದಲ್ಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗೆ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಿಟಿ ರವಿ ಅವರಿಗೆ ಕರೆದು ಬುದ್ಧಿ ಹೇಳೊದು ಬಿಟ್ಟು ಮೆರವಣಿಗೆ ಮಾಡುತ್ತಿದ್ದಾರೆ. ಸಿಟಿ ರವಿ ಮಾಡಿದ್ದೆ ಸರಿ ಎನ್ನುವಂತೆ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ನಲ್ಲಿ ಟ್ರೈನಿಂಗ್ ನಲ್ಲಿ ಈ ರೀತಿ ಹೆಣ್ಣು ಮಕ್ಕಳಿಗೆ ಮಾತನಾಡಲು ಹೆಳಿದ್ದಾರಾ? ಇದೊಂದು ಟ್ರೈನಿಂಗ್ ಕ್ಯಾಂಪಾ.? ಬಿಜೆಪಿ ಮಹಿಳಾ ಮೋರ್ಚಾದಲ್ಲಿರುವ ತಾಯಿಯರೇ ಸಿಟಿ ರವಿಗೆ ಬುದ್ಧಿ ಹೇಳಬೇಕು.
ಸಿಟಿ ರವಿ ಆಣೆ ಪ್ರಮಾಣಕ್ಕೆ ರೆಡಿ ಆಗಲಿ. ಸಿಟಿ ರವಿ ಮಾತನಾಡಿದ್ದು, ಇಡೀ ಪರಿಷತ್ ಸದನಸ ಕೇಳಿದೆ. ತಪ್ಪಾಗಿದೆ ಕ್ಷೆಮೆ ಕೇಳಿ ಮುಂದುವರೆಯಿರಿ ಅದು ಬಿಟ್ಟು ನಾನು ಬೆಳಗಾವಿ ಪಾದಯಾತ್ರೆ ಮಾಡತ್ತಿನಿ, ಆಣೆ ಪ್ರಮಾಣ ಮಾಡತ್ತಿನಿ ಅಂದರೆ ಒಳ್ಳೆಯ ಬೆಳವಣಿಗೆ ಅಲ್ಲಾ, ಬಿಜೆಪಿ ಅವರಿಗೆ ಮೊಂಡುತನ ಮಾಡೋದು, ಸುಳ್ಳು ಹೇಳೊದೆ ಕೆಲಸ ಎಂದು ತಂಗಡಗಿ ಹೇಳಿದ್ದಾರೆ.
ಅಂಬೇಡ್ಕರ್ ಗೆ ಅಮಿತ್ ಶಾ ಮಾತನಾಡಿದ್ದು ಸರಿನಾ?. ನಾವು ದೇವರ ಹೆಸರು ಹೇಳಿ ಸ್ವರ್ಗ ಸೇರಲ್ಲಾ
ಬಿಜೆಪಿಯವರು, ಭೂಮಿ ಮೇಲೆ ಇರುವ ಎಲ್ಲರೂ ದೇವರ ಹೆಸರು ಹೇಳಿ ಸ್ವರ್ಗ ಸೇರಲಿ. ನಾವು ಅಂಬೇಡ್ಕರ್ ಹೆಸರು ಹೇಳಿ ಭೂಮಿ ಮೇಲೆ ಇರತ್ತಿವಿ ಈ ದೇಶಕ್ಕೆ ಬಿಜೆಪಿ ಮತ್ತು ಆರ್ ಎಸ್ ಎಸ್ ಕೊಡುಗೆ ಏನು..? ಎಂದು ಹುಬ್ಬಳ್ಳಿಯಲ್ಲಿ ಶಿವರಾಜ್ ತಂಗಡಗಿ ಪ್ರಶ್ನಿಸಿದರು.