Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಘೋಡಕೆ ಫ್ಲ್ಯಾಟ್ನಲ್ಲಿ ಸೋಮವಾರ ರಾತ್ರಿ ತಂದೆ ಮಗನ ಮೇಲೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಲ್ಲದೇ ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಆರೋಪಿಯ ಮೇಲೆ ಖಾಕಿ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಜಾವೇದ್ ಹಾಗೂ ಮುಜಾಮೀಲ್ ಕುಟುಂಬದವರ ನಡುವೆ ಚಿಕ್ಕ ಮಕ್ಕಳ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯ ಮೆಟ್ಟಿಲಿರಿತ್ತು. ಆದ್ರೆ ಎರಡು ಕುಟುಂಬಗಳ ನಡುವೆ ಹಿರಿಯರು ಮಧ್ಯಸ್ಥಿಕೆ ವಹಿಸಿ ಜಗಳ ಬಗೆ ಹರಿಸಿದ್ದರು. ಆದ್ರೆ ಸೋಮವಾರ ಮತ್ತೆ ಈ ಜಗಳ ಅತಿರೇಕಕ್ಕೆ ಹೋದ ಪರಿಣಾಮ ಮುಜಾಮೀಲ್ ಚಾಕು ತಂದು ಜಾವೇದ್ ಹಾಗೂ ಸಮೀರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಇತ್ತ ಗಾಯಗೊಂಡಿದ್ದ ತಂದೆ ಮಗನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಮಾಹಿತಿ ಆಧರಿಸಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾದಾಗಿದ್ದಾರೆ. ಆಗ ಆರೋಪಿ ಮುಜಾಮೀಲ್ ಇರುವ ಸ್ಥಳದ ಬಗ್ಗೆ ಮಾಹಿತಿ ತಿಳಿದು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ.
ಹೀಗಾಗಿ ಹಳೇ ಹುಬ್ಬಳ್ಳಿ ಠಾಣೆಯ ಇನ್ಸೆಕ್ಟರ್ ಸುರೇಶ್ ಯಳ್ಳುರ ಆತ್ಮ ರಕ್ಷಣೆಗಾಗಿ ಮುಜಾಮೀಲ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇನ್ಸೆಕ್ಟರ್ ಸೇರಿದಂತೆ ಓರ್ವ ಹೆಡ್ ಕಾನ್ಸೆಬಲ್ಗೂ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ವರ್ಷದ ಮುನ್ನ ದಿನವೇ ಪೊಲೀಸರ ಗನ್ ಸದ್ದು ಮಾಡಿದ್ದು, ಸುಖಾಸುಮ್ಮನೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸವನ್ನು ಮಾಡುವವರನ್ನು ಸುಮ್ಮನೇ ಬಿಡಲ್ಲ ಎಂಬುದಕ್ಕೆ ಮುಜಾಮೀಲ್ ಮೇಲೆ ನಡೆದ ಪೈರಿಂಗ್ ‘ಸಾಕ್ಷಿಯಾಗಿದೆ.




