Friday, October 18, 2024

Latest Posts

ಜುಲೈ 13, 2020 ರಾಶಿ ಭವಿಷ್ಯ

- Advertisement -

ಮೇಷ: ಉದ್ಯೋಗ ಗೃಹ ಕೆಲಸಗಳಲ್ಲಿ ತೊಂದರೆ ಕಂಡು ಬಂದರೂ, ಲಾಭಸ್ಥಾನದ ರಾಹು ಲಾಭದಾಯಕನಾದಾನು. ಕುಜನು ಅನುಕೂಲನಾಗಿದ್ದು, ಪರಿಹಾರ ದೊರೆತು, ಉದ್ದೇಶಿತ ಕಾರ್ಯವು ನೆರವೇರಿ ಸಮಾಧಾನವಾದೀತು.

ವೃಷಭ: ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡು ಬರಲಿದೆ. ಉದ್ಯೋಗಿಗಳಿಗೆ ಪರಸ್ಥಾನವಾಸದ ಸಂಚಾರವಿದೆ. ಆರ್ಥಿಕ ಸಂಕಷ್ಟಗಳು ಕಡಿಮೆಯಾಗಲಿದೆ. ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭವೂ ಇರುತ್ತದೆ.

ಮಿಥುನ: ವಾಹನ ಸಂಚಾರ ಬೆಂಕಿ ವಿಚಾರದಲ್ಲಿ ಜಾಗೃತೆ ವಹಿಸಿ. ಮಾತಿನಿಂದ ವಿವಾದಗಳು ಹುಟ್ಟುಹಾಕಲಿದೆ. ಆರೋಗ್ಯದಲ್ಲಿ ಸುಧಾರಣೆ ಇದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ ಶುಭವಿದೆ.

ಕರ್ಕಾಟಕ: ಇಷ್ಟ ಜನರ ಆಗಮನವು ಸಂತಸ ತರಲಿದೆ. ಗುರುಬಲದಿಂದ ಅಶುಭ ಫಲಗಳಿಗೆ ಸ್ವಲ್ಪ ಮಟ್ಟಿಗೆ ತಡೆಯಾಗಲಿದೆ. ಒಮ್ಮೊಮ್ಮೆ ಸ್ಪೂರ್ತಿದಾಯಕ ಆರಾಮ ಜೀವನ ಸಂತಸ ನೀಡಲಿದೆ. ಹೊಟ್ಟೆಯಲ್ಲಿ ಸಮಸ್ಯೆ ಬರುವುದು.

ಸಿಂಹ : ವೃತ್ತಿ ರಂಗದಲ್ಲಿ ಅಧಿಕಾರಿ ಜನರಿಂದ ಕಾರ್ಯಸಾಧನೆಯಾಗಲಿದೆ. ಸ್ತಿರಾಸ್ಥಿ ವಿಚಾರದಲ್ಲಿ ಸಮಸ್ಯೆಗಳಿರುತ್ತದೆ. ಬಂಧು ಬಳಗದವರ ಕಿರಿ ಕಿರಿ ಇದ್ದರೂ ಹಂತ ಹಂತವಾಗಿ ಕಡಿಮೆಯಾಗಿ ಸಮಾಧಾನವಾದೀತು.

ಕನ್ಯಾ: ಮನಸ್ಸಿನಲ್ಲಿದ್ದ ಕೆಲಸ ಕಾರ್ಯಗಳು ಚಾಲನೆಗೆ ಬರಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯದ ಚಿಂತನೆಗಳು ಇರಲಿದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.

ತುಲಾ: ಶಾರೀರಿಕ ತೊಂದರೆಗಳು ಆಗಾಗ ಕಂಡುಬಂದಾವು. ದಾಂಪತ್ಯ ಭಿನ್ನಾಭಿಪ್ರಾಯದಿಂದ ವಿರಸವು ಮೂಡಲಿದೆ. ಶತೃಕೃತ ದೋಷದಿಂದ ಸಮಸ್ಯೆಗಳಿರುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸ ನಡೆಯಲಿದೆ.

ವೃಶ್ಚಿಕ: ದೈವಾನುಗ್ರಹವು ಉತ್ತಮವಿದ್ದು ಶಾರಿರೀಕವಾಗಿಯೂ, ವ್ಯವಹಾರಿಕವಾಗಿಯೂ ವಿಶೇಷ ಆರೋಗ್ಯ ಸೌಲಭ್ಯ ಹೊಂದುವಿರಿ. ಒಡಹುಟ್ಟಿದವರಿಗೆ ಕೆಲವೊಂದು ತೊಂದರೆಗಳು ಬರಲಿದೆ. ಸಂಚಾರದಲ್ಲಿ ಜಾಗೃತೆ.

ಧನು: ವೃತ್ತಿ ಉದ್ಯೋಗದಲ್ಲಿ ಸ್ಪರ್ಧೆ ಬದಲಾವಣೆಗಳು ಕಂಡು ಬರಲಿದೆ. ವಾಸಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಆಗಾಗ ಧನವ್ಯಯ ಉಂಟಾಗಲಿದೆ. ವಿರೋಧಿಗಳನ್ನ ಸಮರ್ಥವಾಗಿ ಎದುರಿಸಬೇಕಾದೀತು.

ಮಕರ: ವ್ಯಾಪಾರಿಗಳಿಗೆ ತೆರಿಗೆ ಅಧಿಕಾರಿಗಳಿಂದ ಕಿರುಕುಳ ತಂದೀತು. ಅಪೇಕ್ಷಿತ ಜನಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಆತ್ಮ ಗೌರವ ವೃದ್ಧಿ ಕಾರ್ಯಸಿದ್ಧಿ, ಆರ್ಥಿಕಾಭಿವೃದ್ಧಿ ಪ್ರಾಪ್ತಿ.

ಕುಂಭ: ಆಗಾಗ ಕಾರ್ಯವೈಫಲ್ಯ, ಬಂಧು ಮಿತ್ರರೊಡನೆ ವಿರೋಧ, ಬುದ್ಧಿ ಅಸ್ಥಿರತೆ ಇತ್ಯಾದಿಗಳು ಉಂಟಾಗಲಿದೆ. ಸಂಚಾರದಲ್ಲಿ ದುಃಖವಿದೆ. ಧಾತು, ದ್ರವ್ಯಗಳ ವ್ಯವಹಾರದಲ್ಲಿ ಲಾಭ ತಂದೀತು. ಆರೋಗ್ಯದ ಕಡೆ ಗಮನವಿರಲಿ.

ಮೀನ: ಇತರರಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ಹೊಂದುವಿರಿ. ಮನೆಯಲ್ಲಿ ಸುಖ ಶಾಂತಿ ನೆಲೆಸಲಿದೆ. ಶುಭಮಂಗಲ ಕಾರ್ಯಗಳಿಗೂ ಇದು ಸುಸಮಯ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.

- Advertisement -

Latest Posts

Don't Miss