Wednesday, February 5, 2025

Latest Posts

ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೋ, ನಕ್ಸಲರಿಗೆ ಸರ್ಕಾರ ಶರಣಾಗಿದೆಯೋ ?: ಸುನೀಲ್ ಕುಮಾರ್

- Advertisement -

Political News: ಇಂದು ಚಿಕ್ಕಮಗಳೂರಿನಲ್ಲಿ ಅಡಗಿ ಕುಳಿತಿದ್ದ 6 ನಕ್ಸಲು ಷರತ್ತುಬದ್ಧವಾಗಿ ಸಿಎಂ ಸಿದ್ದರಾಮಯ್ಯ ಎದುರು ಶರಣಾಗಿದ್ದಾರೆ. ಈ ಬಗ್ಗೆ ಬಿಜೆಪಿಯ ಕೆಲ ನಾಯಕರು ವಿರೋಧ ಹೊರಹಾಕಿದ್ದು, ನಕ್ಸಲರಿಗೆ ಸಪೋರ್ಟ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿ, ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸುನೀಲ್ ಕುಮಾರ್ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಅವರ ಟ್ವೀಟ್ ಇಂತಿದೆ.

ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿ ಆಗಿದ್ದ ತಣ್ಣಗಿನ ಮಲೆನಾಡಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತೀರಾ ಸಿದ್ದರಾಮಯ್ಯನವರೇ? ಇದರಿಂದ ಪೊಲೀಸರ ಆತ್ಮ ಸ್ಥೈರ್ಯ ಏನಾಗಬೇಡ?ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ.

ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ?ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ.ಅವರಿಗೆ ಕ್ಷಮೆ,ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ!

ಆರು ಕೋಟಿ ಕನ್ನಡಿಗರ ಮುಖ್ಯಮಂತ್ರಿ ತಮ್ಮ ಅಧಿಕೃತ ಕಚೇರಿಯಲ್ಲಿ ಆರು ಮಂದಿ ನಕ್ಸಲರನ್ನು ಸ್ವಾಗತಿಸಲು ನಡು ಬಗ್ಗಿಸಿ ನಿಂತಿದ್ದಾರೆ. ಕರ್ನಾಟಕದಲ್ಲಿ ಕಾನೂನಿನ ಕೊಲೆಯಾಗಿದೆ. ಸರ್ಕಾರವೇ ಪ್ರಾಯೋಜಿಸಿದೆ.

ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೋ, ನಕ್ಸಲರಿಗೆ ಸರ್ಕಾರ ಶರಣಾಗಿದೆಯೋ ? ಭೂಗತ ಚಟುವಟಿಕೆ ನಡೆಸಿ ತಲೆಮರೆಸಿಕೊಂಡಿದ್ದ ನಕ್ಸಲರು ಶರಣಾಗಬೇಕಿರುವುದು ಸಂಬಂಧಪಟ್ಟ ಎಸ್ಪಿ ಕಚೇರಿ ಅಥವಾ ಸಬ್ ಇನ್ಸ್‌ಪೆಕ್ಟರ್ ಎದುರು. ಆದರೆ ಇಲ್ಲೇನಾಗುತ್ತಿದೆ ?

ನಕ್ಸಲ್ ವಿಕ್ರಮ್ ಗೌಡರನ್ನು ಎನ್ ಕೌಂಟರ್ ಮಾಡಿದ ಪೊಲೀಸರ ದಿಟ್ಟ ಕ್ರಮಕ್ಕೆ ಮಾನ್ಯ ಸಿದ್ದರಾಮಯ್ಯ ಇಂದು ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.ಮತ್ತು ಪೊಲೀಸ್’ರನ್ನ ಅಣಕಿಸುವ ರೀತಿ ಸಿ.ಎಂ ನಡೆದುಕೊಂಡಿದ್ದಾರೆ.ಇಲ್ಲಿ ಯಾರ ಶರಣಾಗತಿ?ಸರ್ಕಾರದ ಮುಂದೆ ನಕ್ಸಲರಶರಣಾಗತಿಯೋ?ಅಥವಾ ಬುದ್ದಿಜೀವಗಳ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನಕ್ಸಲರಿಗೆಶರಣಾದರೊ? ಎಂದು ಸುನೀಲ್ ಕುಮಾರ್ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

- Advertisement -

Latest Posts

Don't Miss