Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್, ಒಂದು ಬೌಲ್ ಪನೀರ್, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಕ್ಯೂಬ್ ಬೆಣ್ಣೆ, 1 ಪಲಾವ್ ಎಲೆ, 2 ಒಣಮೆಣಸು, 1 ಸ್ಪೂನ್ ಜೀರಿಗೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, 1 ಕ್ಯಾಪ್ಸಿಕಂ, 1 ಟೊಮೆಟೋ, 2 ಸ್ಪೂನ್ ಫ್ರೆಶ್ ಕ್ರೀಮ್, ಕೊಂಚ ತುರಿದ ಪನೀರ್, ಗರಂ ಮಸಾಲೆ, ಚಾಟ್ ಮಸಾಲೆ, 1ಸ್ಪೂನ್ ಕಸೂರಿ ಮೇಥಿ, ಉಪ್ಪು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ, ಚೆನ್ನಾಗಿ ಕುದಿಸಿ, ಬಳಿಕ 5 ನಿಮಿಷ ಪಾಲಕ್ ಹಾಕಿ ಕುದಿಸಿ. ಬಳಿಕ ಪಾಲಕ್ ಮತ್ತು ಬಿಸಿ ನೀರು ಸಪರೇಟ್ ಮಾಡಿ. ಪಾಲಕ್ ಸೊಪ್ಪನ್ನು ತಣ್ಣೀರಿನ ಬೌಲ್‌ಗೆ ಹಾಕಿ ತೆಗೆಯಿರಿ. ಈಗ ಮಿಕ್ಸಿ ಜಾರ್‌ಗೆ ಪಾಲಕ್, 3 ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಪೇಸ್ಟ್ ತಯಾರಿಸಿ.
ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಬೆಣ್ಣೆ, ಪಲಾವ್ ಎಲೆ, ಒಣಮೆಣಸು, ಜೀರಿಗೆ, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. ಬಳಿಕ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಬಳಿಕ ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಸೇರಿಸಿ, ಹುರಿಯಿರಿ.
ಬಳಿಕ ಪಾಲಕ್ ಪೇಸ್ಟ್, ಕೊಂಚ ನೀರು, ಫ್ರೆಶ್ ಕ್ರೀಮ್, ತುರಿದ ಪನೀರ್ ಸೇರಿಸಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಪನೀರ್ ಕ್ಯೂಬ್ಸ್, ಕೊಂಚ ಗರಂ ಮಸಾಲೆ, ಚಾಟ್ ಮಸಾಲೆ, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿ, ಮತ್ತೆ ಎರಡು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಈಗ ಪಾಲಕ್ ಪನೀರ್ ರೆಡಿ.