Uttar Pradesh News: ಕಳೆದ ವರ್ಷದ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಹಾಾಗಾಗಿ ಇಂದೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಇಂದಿನಿಂದ 3 ದಿನಗಳ ಕಾಲ ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಕಾರ್ಯಕ್ರಮ ನಡೆಯಲಿದೆ.
ವಾರ್ಷಿಕೋತ್ಸವ ಅಂಗವಾಗಿ, ರಾಮಲಲ್ಲಾನಿಗೆ ವಿಶೇಷ ಪೂಜೆ, ಆರತಿ ಎಲ್ಲವೂ ನಡೆಯಿತು. ವಿಶೇಷ ಮಂತ್ರ ಪಠಣದೊಂದಿಗೆ ಪಂಚಾಮೃತ ಅಭಿಶೇಕ, ಗಂಗಾಜಲ ಸ್ನಾನವೂ ಮಾಡಿಸಲಾಯಿತು. ಬಳಿಕ ಚಿನ್ನ ಮತ್ತು ಬೆಳ್ಳಿ ದಾರಗಳಿಂದ ನೇಯ್ದ ಬಟ್ಟೆ, ಚಿನ್ನದ ಆಭರಣಗಳಿಂದ ಅಲಂಕರಿಸಲಾಯಿತು. ಬಳಿಕ ರಾಮಲಲ್ಲಾನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು.
ಇದಕ್ಕೂ ಮುನ್ನ ಸಿಎಂ ಯೋಗಿ ಆದಿತ್ಯನಾಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪೂಜೆಯಲ್ಲಿ ಭಾವಹಿಸಿದರು. ಮಧ್ಯಾಹ್ನದ ಬಳಿಕ ಆರಂಭವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಜನರನ್ನು ಕುರಿತು ಭಾಷಣ ಮಾಡಿದರು. ಕೆಲ ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇಂದೇ ಏಕೆ ವಾರ್ಷಿಕೋತ್ಸವ ಸಂಭ್ರಮ..?
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಿದ್ದು ಜನವರಿ 22ರಂದು. ಆದರೆ 11ನೇ ತಾರೀಖಿನಿಂದಲೇ ಕಾರ್ಯಕ್ರಮ ಶುರು ಮಾಡಲಾಗಿದೆ. ಇದಕ್ಕೆ ಕಾರಣವೇನು ಅಂದ್ರೆ, ಹಿಂದೂ ಪಂಚಾಂಗದಲ್ಲಿ ಬರುವ ದಿನಾಂಕದಂದು ಕಾರ್ಯಕ್ರಮ ಮಾಡಲಾಗಿದೆ. ಹಾಗಾಗಿ ಇನ್ನು ಮುಂದೆಯೂ ಕ್ಯಾಲೆಂಡರ್ ಪ್ರಕಾರ ವಾರ್ಷಿಕೋತ್ಸವ ಆಚರಿಸದೇ, ಪಂಚಾಂಗದಲ್ಲಿ ಬರುವ ತಿಥಿಯ ಪ್ರಕಾರ, ವಾರ್ಷಿಕೋತ್ಸವ ಆಚರಿಸಲಾಗುತ್ತದೆ.