Wednesday, April 23, 2025

Latest Posts

ಶೃಂಗೇರಿ ಶಾರದಾಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಶೃಂಗೇರಿ ಶಾರದಾ ಪೀಠದಲ್ಲಿ ಹಮ್ಮಿಕೊಂಡಿದ್ದ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆಯ ಸುವರ್ಣ ಭಾರತೀ ಹಾಗೂ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಡಿಸಿಎಂ, ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದಭಜನೆ ಪರಮ ಸುಖವಯ್ಯಾ ಎನ್ನುವಂತೆ ಇಂದು ಈ ಅಮೂಲ್ಯವಾದ ಕಾರ್ಯಕ್ರಮದಲ್ಲಿ ನಾವೆಲ್ಲಾ ಭಾಗವಹಿಸುವ ಭಾಗ್ಯ ನಮ್ಮದಾಗಿದೆ. ದಕ್ಷಿಣ ಭಾರತದ ಮೊಟ್ಟಮೊದಲ ಪೀಠವೆಂದರೆ ಅದು ಶೃಂಗೇರಿ ಶಾರದಾ ಪೀಠ. ಶಂಕರಾಚಾರ್ಯರು ಸ್ಥಾಪಿಸಿದ ಈ ಪೀಠವು ಗುರು ಪರಂಪರೆಗೆ ಹೆಸರಾಗಿದ್ದು, ಜಗತ್ತಿಗೆ ಧರ್ಮದ ಮಹತ್ವವನ್ನು ಸಾರಿದೆ. ನಮ್ಮ ಪ್ರಯತ್ನಗಳು ವಿಫಲ ಆಗಬಹುದು. ಆದರೆ ನಮ್ಮ ಪ್ರಾರ್ಥನೆ ವಿಫಲ ಆಗುವುದಿಲ್ಲ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ಯಾರು ಧರ್ಮವನ್ನ ಕಾಪಾಡುತ್ತಾರೋ ಅವರನ್ನು ಧರ್ಮವು ಕಾಪಾಡುತ್ತದೆ. ಮಾನವೀಯತೆಯ ಧರ್ಮದೊಂದಿಗೆ ನಾವೆಲ್ಲಾ ಜೀವನ ನಡೆಸೋಣ ಎಂದು ಹೇಳಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಶೃಂಗೇರಿಯ ಪ್ರಸಿದ್ಧ ಶ್ರೀ ಶಾರದಾಂಬ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆ. 1200 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಆಧ್ಯಾತ್ಮಿಕ ಭಕ್ತಿಯ ಪವಿತ್ರ ತಾಣವಾಗಿದ್ದು, ಕರ್ನಾಟಕದ ಹೆಮ್ಮೆಯ ಪುಣ್ಯಕ್ಷೇತ್ರವಾಗಿದೆ ಎಂದು ಬರೆದುಕೊಂಡಿದ್ದಾರೆ.

- Advertisement -

Latest Posts

Don't Miss