Hubli News: ಬೆಂಗಳೂರಿನಲ್ಲಿ ಗೋ ಕೆಚ್ಚಲಿಗೆ ಕತ್ತರಿ ಹಾಕಿರುವ ಘಟನೆ ಖಂಡಿಸಿ ಹಾಗೂ ಹೇಯ್ ಕೃತ್ಯ ಮಾಡಿದ ಕಿರಾತಕನ ವಿರುದ್ಧ ಸೇರಿ ಗೋ ಹಿಂಸೆ ಮಾಡುಔರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಹುಬ್ಬಳ್ಳಿಯಲ್ಲಿಗೋ ರಕ್ಷಕರು ಸೇರಿ ಗೋ ಮಾತೆ ಪ್ರಿಯರು ಬೀದಿಗೆ ಇಳಿದು ಪ್ರತಿಭಟನೆ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ನಗರದ ಮೂರು ಸಾವಿರ ಮಠದಿಂದ ರಾಣಿ ಚೆನ್ನಮ್ಮ ವೃತದವರೆಗೆ ಮೂರು ಸಾವಿರ ಮಠದ ಗುರುಸಿದ್ಧ ಶ್ರೀ ರಾಜಯೋಗಿಂದ್ರ ಸ್ವಾಮಿಜಿಗಳ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ, ಗೋ ಪ್ರಿಯರು ಗೋ ಕೆಚ್ಚಲಿಗೆ ಕತ್ತರಿ ಹಾಕಿದ ಕಿರಾತಕ ಸೇರಿ ಗೋ ಹಿಂಸೆ ಮಾಡುವವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಇದೇ ವೇಳೆ ರಾಣಿ ಚೆನ್ನಮ್ಮ ವೃತದಲ್ಲಿ ಮಾನಸರಪಳಿ ನಿರ್ಮಿಸಿ ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಗೋಮಾತೆ ಹಿಂಸೆ ಮಾಡುವವರ ಸಂಖ್ಯೆ ಇತ್ತೀಚೆಗೆ ಏರುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಗೋವಿನ ಕೆಚ್ಚಲಿಗೆ ಕತ್ತರಿ ಹಾಕಿ, ಗೋವನ್ನು ನರಳುವಂತೆ ಮಾಡಿದರು. ಅಲ್ಲದೆ ಹಿಂದುಗಳು ಗೋಮಾತೆಯನ್ನು ಪೂಜನೀಯ ಸ್ಥಾನದಲ್ಲಿ ಇಟ್ಟಿದ್ದಾರೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಿದ್ದರು ಗೋ ಹಿಂಸೆ ಮಾಡುವವರಿಗೆ ಭಯವಿಲ್ಲ. ಕೆಚ್ಚಲು ಕಟ್ಟ ಮಾಡಿದ ಕಿರಾತಕ ಸೇರಿ ಗೋ ಹಿಂಸೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ತಕ್ಕ ಶಿಕ್ಷೆ ಆಗುವಂತೆ ಮಾಡಬೇಕು.. ಇಲ್ಲವಾದಲ್ಲಿ ಇನ್ನಷ್ಟು ಉಗ್ರ ಹೋರಾಟ ಕಡೆ ಹೆಜ್ಜೆ ಇಡಬೇಕಾಗುತ್ತದೆ ಎಂದು ಸರ್ಕಾರ ಹಾಗೂ ಗೃಹ ಇಲಾಖೆಗೆ ಎಚ್ಚರಿಕೆ ನೀಡಿದರು.